“ಭಾರತ್” ಎಂಬ ಹೆಸರು ಬದಲಾವಣೆಗೆ ಏನೆಂದಿತು ವಿಶ್ವಸಂಸ್ಥೆ? 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

‘ಇಂಡಿಯಾ’ ಹೆಸರನ್ನು ‘ಭಾರತ್’ ಎಂದು ಮರುನಾಮಕರಣದ ಬಗ್ಗೆ ದೇಶಾದ್ಯಂತ ಪರ/ವಿರೋಧ ಚರ್ಚೆಯಾಗುತ್ತಿರುವ ಬೆನ್ನಲ್ಲೇ ವಿಶ್ವಸಂಸ್ಥೆ  ಸಕಾರಾತ್ಮಕವಾಗಿ ಸ್ಪಂದಿಸಿದೆ. ಸೆಪ್ಟೆಂಬರ್ 18 ರಿಂದ 22ರವರೆಗೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ನಿರೀಕ್ಷೆಯಿದೆ. ಏತನ್ಮಧ್ಯೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ಉಪ ವಕ್ತಾರ ಫರ್ಹಾನ್ ಹಕ್ ಯಾವುದೇ ದೇಶ ದೇಶ ಹೆಸರನ್ನು ಬದಲಾಯಿಸು ಪ್ರಸ್ತಾವನೆಯಿಟ್ಟರೆ ಅದನ್ನು ವಿಶ್ವಸಂಸ್ಥೆ ಪರಿಗಣಿಸುವುದಾಗಿ ತಿಳಿಸಿದರು.

ಈ ಕುರಿತು ಉದಾಹರಣೆ ಸಹಿತ ವಿವರಿಸಿದ ವಿಶ್ವಸಂಸ್ಥೆ..ಈ ಹಿಂದೆ ಟರ್ಕಿ ಹೆಸರನ್ನು ‘ಟರ್ಕಿಯೆ’ ಎಂದು ಬದಲಾಯಿಸಿದ್ದನ್ನು ಉಲ್ಲೇಖಿಸಿದರು. ಟರ್ಕಿ ವಿಷಯದಲ್ಲಿ ಅಧಿಕೃತ ಮನವಿಗೆ ನಾವು ಪ್ರತಿಕ್ರಿಯಿಸಿದ್ದೇವೆ ಎಂದು ಗುಟೆರಸ್‌ ಹೇಳಿದರು. ಅದೇ ರೀತಿ ಭಾರತದ ಹೆಸರು ಬದಲಾವಣೆ ಕುರಿತು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದು.. ಭಾರತ್ ಎಂಬುದಾಗಿ ಹೆಸರುನ್ನು ಮರುನಾಮಕರಣ ಮಾಡಬಹುದು ಎಂದರು.

G-20 ರಾಷ್ಟ್ರಗಳ ಮುಖ್ಯಸ್ಥರಿಗೆ ಭೋಜನ ಕಾರ್ಯಕ್ರಮವನ್ನು ಆಯೋಜಿಸಲು ಕಳುಹಿಸಲಾದ ಆಮಂತ್ರಣ ಪತ್ರದಲ್ಲಿ “ಪ್ರಸಿಡೆಂಟ್‌ ಆಫ್‌ ಇಂಡಿಯಾ ಬದಲು, ʻಪ್ರೆಸಿಡೆಂಟ್‌ ಆಫ್‌ ಭಾರತ್‌ʼ ಎಂದು ಬರೆಯಲಾಗಿದೆ. ಆ ಬಳಿಕ ಪ್ರಧಾನಿ ಮೋದಿಯವರ ಇಂಡೋನೇಷ್ಯಾ ಭೇಟಿಯ ಟಿಪ್ಪಣಿಯಲ್ಲಿಯೂ ʻಪ್ರೈಮಿನಿಸ್ಟರ್‌ ಆಫ್‌ ಭಾರತ್‌ʼ ಎಂದು ಬರೆಯಲಾಗಿದೆ. ಈ ಎರಡು ಘಟನೆಗಳು ಇಂಡಿಯಾ ಹೆಸರು ಭಾರತ್ ಎಂದು ಬದಲಾಗಲಿದೆ ಎಂಬ ವಾದಗಳಿಗೆ ಬಲ ನೀಡುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here