ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಸರ್ಕಾರ ಬಡವರ ವಿರೋಧಿ, ಬಡವರಿಗೆ ಅಕ್ಕಿ ನಿರಾಕರಿಸಿದ್ದು ಇದೇ ಬಿಜೆಪಿ ಸರ್ಕಾರ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಾವು ರಾಜ್ಯದ ಮುಖ್ಯಮಂತ್ರಿಯಾದಾಗ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವಂತೆ ಭಾರತೀಯ ಆಹಾರ ನಿಗಮಕ್ಕೆ ಪತ್ರ ಬರೆದಿದೆವು. ಅದಕ್ಕೆ ಅವರು ಒಪ್ಪಿದ್ದರು. ಆದರೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ಅಕ್ಕಿ ನಿರಾಕರಣೆ ಮಾಡಿದೆ.
ನಾವು ಕೇಂದ್ರ ಸರ್ಕಾರವನ್ನು ನಂಬಿದ್ದೆವು ಆದರೆ ಈ ರೀತಿ ಸಮಸ್ಯೆ ತಂದೊಡ್ಡಿದ್ದು ಬಿಜೆಪಿ ಸರ್ಕಾರ, ರಾಜಕೀಯ ಇರಲಿ, ಈ ಅಕ್ಕಿ ಬಡವರಿಗಾಗಿ ನೀಡುವುದು ಎನ್ನುವ ಅರಿವೂ ಬಿಜೆಪಿಗಿಲ್ಲ. ಫ್ರೀ ಆಗಿ ಅಕ್ಕಿ ನೀಡಿ ಎಂದು ಹೇಳಿಲ್ಲ. ಹಣವನ್ನು ಕೊಡೋದಕ್ಕೂ ತಯಾರಿದ್ದೆವು ಆದರೆ ಒಪ್ಪಿಲ್ಲ. ಬಿಜೆಪಿ ಕಟ್ಟಾ ಬಡವರ ವಿರೋಧಿ ಅವರಿಗೆ ಚುನಾವಣೆ ಸಮಯದಲ್ಲಿ ಪಾಠ ಕಲಿಸಿ ಎಂದು ಹೇಳಿದ್ದಾರೆ.