ಹೊಸದಿಗಂತ ವರದಿ ವಿಜಯಪುರ:
ನಟ ಪ್ರಕಾಶ ರಾಜ್ ಒಬ್ಬ ಅಯೋಗ್ಯ. ಪ್ರಕಾಶ್ ರಾಜ್ ಅಪ್ಪ- ಅಮ್ಮನಿಗೆ ಹುಟ್ಟಿದ್ದಾನಾ ಅನ್ನೋದಕ್ಕೆ ಗ್ಯಾರಂಟಿ ಏನು ? ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಟ ಪ್ರಕಾಶ ರಾಜ್ ಯಾರಿಗೆ ಹುಟ್ಟಿದ್ದಾನೆ ಎಂದು ತಾಯಿನಾ ಕೇಳಿದ್ದಾನಾ? ತಾಯಿ ಹೇಳಿದಾಗಲೇ ಅಪ್ಪ ಯಾರು ಅಂತ ಗೊತ್ತಾಗೊದು ಅಲ್ವಾ? ಪ್ರಕಾಶ್ ರಾಜ್ ತಾಯಿಯ ಬಗ್ಗೆ ನನಗೆ ಗೌರವ ಇದೆ ಎಂದರು.
ಅಲ್ಲದೇ, ಗೃಹ ಸಚಿವ ಜಿ. ಪರಮೇಶ್ವರ್ ತಾಕತ್ತು ಇದ್ದರೆ ಮುಸಲ್ಮಾನರ ಹುಟ್ಟಿನ ಬಗ್ಗೆ ಪ್ರಶ್ನಿಸಲಿ. ಮುಸ್ಲಿಂರು ಎಲ್ಲಿ ಹುಟ್ಟಿದ್ದರು, ಎಲ್ಲಿಂದ ಬಂದರು ಪ್ರಶ್ನಿಸಲಿ. ಮೈ ಮೇಲೆ ಜ್ಞಾನ ಇಟ್ಟುಕೊಂಡು ಬಾಯಿ ಬಿಡಬೇಕು ಎಂದು ಪರಮೇಶ್ವರ ವಿರುದ್ಧ ವಾಗ್ದಾಳಿ ನಡೆಸಿದರು.
ಉದಯನಿಧಿ ಸ್ಟಾಲಿನ್ ಒಬ್ಬ ಅಯೋಗ್ಯ, ಹುಚ್ಚ. ಉದಯನಿಧಿಗು ಸನಾತನ ಧರ್ಮಕ್ಕೂ ಏನ್ ಸಂಬಂಧ ? ಸ್ಟಾಲಿನ್ ಯಾರಿ ? ಸಾಧು- ಸಂತರ ತಪಸ್ಸಿನಿಂದ ಸನಾತನ ಧರ್ಮವಾಗಿದೆ. ಧರ್ಮವನ್ನ ಮುಟ್ಟಿದವನು ಯಾವನೂ ಉದ್ಧಾರ ಆಗಲ್ಲ. ಸನಾತನ ಧರ್ಮದ ನಾಶ ಅವರಪ್ಪ, ಅಜ್ಜನಿಂದಲೂ ಆಗಿಲ್ಲ, ಆಗೋದು ಇಲ್ಲ. ಧರ್ಮ ವಿರುದ್ಧ ರಾಕ್ಷಸಿ ಪ್ರವೃತ್ತಿ ತೋರಿಸಿದ್ದಾರೆ, ಅವರು ನಾಶವಾಗಿ ಹೋಗುತ್ತಾರೆ ಎಂದರು.
ಹಿಂದುತ್ವದ ಬಗ್ಗೆ ಶಾಸಕ ಯತ್ನಾಳ ಶೇ. 90ರಷ್ಟು ಮಾತನಾಡುತ್ತಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ನಿಜವಾದ ಗಂಡು, ಯತ್ನಾಳ ನಮ್ಮ ಲೀಡರ್. ಇದು ನನಗೆ ಖುಷಿ ಇದೆ. ಆದರೆ ಶೇ.10ರಷ್ಟು ಮಾತ್ರ ಆಚೆ ಈಚೆ ಮಾತನಾಡುತ್ತಾರೆ. ಅದನ್ನು ನಾವು ಸರಿ ಪಡಿಸುತ್ತೇವೆ ಎಂದರು.
ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮುಖಂಡರಾದ ವಿಜುಗೌಡ ಪಾಟೀಲ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.