ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಯಶಸ್ಸಿನ ಓಡಾಟದಲ್ಲಿದ್ದಾರೆ. ರಕ್ಷಿತ್, ಸದ್ಯ ಚಿತ್ರತಂಡದ ಜೊತೆ ಹುಟ್ಟೂರು ಉಡುಪಿಗೆ ಭೇಟಿ ನೀಡಿ, ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ.
ಅಲಂಕಾರ ಚಿತ್ರಮಂದಿರಕ್ಕೆ ಬಂದ ರಕ್ಷಿತ್ ಶೆಟ್ಟಿ, ಅಭಿಮಾನಿಗಳತ್ತ ಕೈಬೀಸಿ ಕೃಷ್ಣಜನ್ಮಾಷ್ಟಮಿಯ ಶುಭಾಶಯ ಹೇಳಿದರು. ರಾಜ್ಯಾದ್ಯಂತ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಥಿಯೇಟರ್ಗೆ ಬಂದು ಚಿತ್ರ ನೋಡಿ ಎಂದರು.
‘ಸಪ್ತಸಾಗರದಾಚೆ ಎಲ್ಲೋ’ ಎರಡನೇ ಭಾಗ ಸಿದ್ದವಾಗಿದ್ದು, ಅಕ್ಟೋಬರ್ 10ಕ್ಕೆ ರಿಲೀಸ್ ಆಗಲಿದೆ. ಅದಕ್ಕೂ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು.