ತಮಿಳುನಾಡು ಸಚಿವ ಸ್ಟಾಲಿನ್ ಹೇಳಿಕೆಗೆ ಖಂಡನೆ: ಕಲಬುರಗಿಯಲ್ಲಿ ಪ್ರತಿಕೃತಿ ದಹನ, ಪ್ರತಿಭಟನೆ

ಹೊಸದಿಗಂತ ವರದಿ , ಕಲಬುರಗಿ:

ಸನಾತನ ಹಿಂದು ಧರ್ಮದವನ್ನು ಡೆಂಗ್ಯೂ, ಮಲೇರಿಯಾ, ಕೊರೋನಾಗೆ ಹೋಲಿಸಿ,ಸನಾತನ ನಿಮೂ೯ಲನೆ ಮಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಪ್ರತಿಕೃತಿ ದಹನ ಮಾಡುವ ಮೂಲಕ ಹಿಂದೂ ಜಾಗೃತಿ ಸೇನೆಯೂ ಪ್ರತಿಭಟನೆ ನಡೆಸಿತು.

ನಗರದ ಸದಾ೯ರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಉದಯನಿಧಿ ಸ್ಟಾಲಿನ್ ಪ್ರತಿಕೃತಿ ಧಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ ಸ್ವಾಧಿ,ಪ್ರಚಾರದ ಭರದಲ್ಲಿ ಸನಾತನ ಹಿಂದು ಧರ್ಮದ ಬಗ್ಗೆ ಅವಹೇಳನವಾಗಿ ಮಾತನಾಡಿ ಇಡೀ ಹಿಂದು ಸಮಾಜಕ್ಕೆ ಅಪಮಾನವಾಗಿದೆ.ಅಲ್ಲದೇ ಸನಾತನ ರುಷಿ ಮುನಿಗಳಿಗೆ,ಸಾಧು ಸಂತರಿಗೆ ಅವಮಾನವಾಗಿದೆ ಎಂದರು.

ಸಂವಿಧಾನದ ಅಡಿಯಲ್ಲಿ ಸಚಿವನಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಸ್ಟಾಲಿನ್, ಗೆ ಇನ್ನೋಂದು ಧರ್ಮದ ಬಗ್ಗೆ ಅವಹೇಳನವಾಗಿ ಮಾತನಾಡುವ ಯಾವ ನೈತಿಕತೆಯೂ ಇಲ್ಲವೆಂದರು.ಮುಂದಿನ ದಿನಗಳಲ್ಲಿ ಹಿಂದು ಧರ್ಮದ ಬಗ್ಗೆ ಅವಹೇಳನವಾಗಿ ಮಾತನಾಡುವುದಾಗಿ ಮುಂದುವರೆದರೇ,ಹಿಂದೂ ಜಾಗೃತಿ ಸೇನೆಯೂ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಶಶಿಕಾಂತ ದಿಕ್ಷಿತ್,ಶಂಕರ ಚೌಕಾ,ಸಂತೋಷ ಸೋನಾವಣೆ,ಸುನೀಲ್ ರಾಠೋಡ್, ದಶರಥ ಇಂಗೋಳೆ,ಭಾಗ್ಯಶ್ರೀ ಆಯಿ,ಸಂಜನಾ ಆಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!