ಹೊಸದಿಗಂತ ವರದಿ,ವಿಜಯಪುರ:
ಜೆಡಿಎಸ್ ಯಾರ ಜೊತೆಗೆ ಸೇರಿದರೂ ಲಾಸ್ ಆಗುತ್ತೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತದೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲೈನ್ಸ್ ನಿಂದ ಬಿಜೆಪಿಗೆ ಲಾಸ್ ಆಗಲಿದೆ. ಜೆಡಿಎಸ್ ಸುಮ್ನೆ ಸೆಕ್ಯೂಲರ್ ಅಂತ ಇಟ್ಟುಕೊಂಡಿರೋದು ಎಂದು ದೂರಿದರು.
ಈಗಲು ಮನೆಗಾಗಿಯೇ ಸೀಟ್ ಹಂಚಿಕೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಹಿಂದೆ ದಲಿತ-ಮುಸ್ಲಿಂ ಎರಡು ಟಿಕೆಟ್ ಕೇಳಿದಾಗ ಕೊಡಲಿಲ್ಲ.
ಆಗ ಗೆಜ್ಜೆ ಪೂಜೆ, ಈಗ ರಿಯಲ್ ನಾಟಕ ಶುರು. ಈಗಲು ಬಿಜೆಪಿ ಹೈಕಮಾಂಡ್ ಬಳಿ ಮನೆಗೆ ಸೀಟ್ ಕೇಳ್ತಿದೆ. ಜೆಡಿಎಸ್ ಕುಟುಂಬ ರಾಜಕಾರಣ ಎಂದು ಹರಿಹಾಯ್ದರು.
ನಾನು ಯಾವ ಪಕ್ಷದಲ್ಲಿ ಇಲ್ಲ. ರಾಜಕೀಯದಲ್ಲಿ ನಿವೃತ್ತಿ ಇಲ್ಲ. ಜೀವನ, ಉಸಿರು ಇರುವ ವರೆಗೂ ರಾಜಕಾರಣದಲ್ಲಿ ಇದ್ದೇ ಇರುತ್ತೇನೆ ಎಂದರು.
ಬಿ.ಕೆ. ಹರಿಪ್ರಸಾದ್ ತಮ್ಮ ವೇದನೆ ಹೇಳಿದ್ದಾರೆ. ಆದರೆ ವೇದನೆಯನ್ನು ಬಹಿರಂಗವಾಗಿ ಪ್ರದರ್ಶನ ಮಾಡಬಾರದಿತ್ತು. ಈಡಿಗ ಸಮುದಾಯಕ್ಕೆ ಕಾಂಗ್ರೆಸ್‌ನಲ್ಲಿ ಸಿಕ್ಕ ಅವಕಾಶಗಳು ಬೇರೆಲ್ಲೂ ಸಿಕ್ಕಿಲ್ಲ ಎಂದರು.