ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬೆಂಗಳೂರಿನಲಿ ನಡೆಯುತ್ತಿರುವ ಬಂದ್ಗೆ ಖಾಸಗಿ ಶಾಲಾ ವಾಹನಗಳೂ ಬೆಂಬಲ ನೀಡಿದ್ದು, ಅವುಗಳೂ ರಸ್ತೆಗಿಳಿಯುವುದಿಲ್ಲ. ಈಗಾಗಲೇ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಗೆ ಬಸ್ಗಳ ಮಾಲೀಕರು ಪತ್ರ ಬರೆದು ಬಂದ್ಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಇಂದು ಸಿಲಿಕಾನ್ ಸಿಟಿಯಲ್ಲಿ ಕೆಲ ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿದೆ.
ಇನ್ನು ರಜೆ ಕೊಡದ ಸಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಪರದಾಡುವ ಸ್ಥಿತಿ ಬಂದೊದಗಿದೆ. ಆರ್ಕಿಡ್ ಶಾಲೆ ಸೇರಿದಂತೆ ಕೆಲವು ಖಾಸಗಿ ಶಾಲೆಗಳಿಗೆ ಮಾತ್ರ ರಜೆ ಆದೇಶಿಸಿದ್ದು, ಉಳಿದ ಶಾಲೆಗಳಿಗೆ ತೆರಳಲು ಆಟೋಗಳು ಸಿಗದೆ ಮಕ್ಕಳು, ಪೋಷಕರ ಸ್ಥಿತಿ ಹೇಳತೀರದಾಗಿದೆ.