ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನ ಬಳಿಯ ಗುಂಡೂರಾವ್ ಲೇಔಟ್ ನಿವಾಸಿ ಪಿ.ಕೆ.ಭಟ್ (ಪೊಸವಣಿಕೆ ಕೇಶವ ಭಟ್) ಬೆಂಗಳೂರಿನಲ್ಲಿ ನಿಧನರಾದರು.
ಮೂಲತಃ ಕುಂಬಳೆಯವರಾಗಿದ್ದ ಇವರು ಮಡಿಕೇರಿಯಲ್ಲಿ ಸುಮಾರು 50 ವರ್ಷಗಳಿಂದ ವ್ಯಾವಹಾರಿಕ ಜೀವನವನ್ನು ನಡೆಸುತ್ತಿದ್ದರು.
ಮೃತರು ಪತ್ನಿ, ಪುತ್ರ, ಪುತ್ರಿಯರನ್ನೊಳಗೊಂಡಂತೆ ಅಪಾರ ಮಿತ್ರವರ್ಗವನ್ನು ಅಗಲಿದ್ದಾರೆ.