VIRAL VIDEO| ಇದು ರಕ್ತ ಅಲ್ಲ ಕಣ್ರೀ! ಈ ನಗರದ ಬೀದಿ ಬೀದಿಗಳಲ್ಲಿ ನದಿಯಂತೆ ಹರಿದ ರೆಡ್‌ ವೈನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೀದಿಬೀದಿಗಳಲ್ಲಿ ನದಿಯಂತೆ ರೆಡ್‌ವೈನ್‌ ಹರಿದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. ಪೋರ್ಚುಗೀಸ್‌ನ ಸಣ್ಣ ಪಟ್ಟಣವಾದ ಸಾವೊ ಲೊರೆಂಕೊ ಡಿ ಬೈರೊದ ರಸ್ತೆಗಳ ತುಂಬೆಲ್ಲಾ ರೆಡ್‌ವೈನ್‌ ನದಿಯಂತೆ ಹರಿದಿದೆ. ಮೊದಲಿಗೆ ಇಷ್ಟು ಕೆಂಪು ಬಣ್ಣದ ನೀರನ್ನು ಕಂಡು ಇದ್ಯಾವ ತರಹದ ಪ್ರವಾಹ ಎಂದು ಜನ ಭಯಬೀತರಾಗಿದ್ದರು. ನಂತರ ವಿಚಾರ ತಿಳಿದು ಉಸ್ಸಪ್ಪಾ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಆ ಮಾರ್ದಲ್ಲಿ 600,000 ಗ್ಯಾಲನ್‌ಗಳಷ್ಟು ಮದ್ಯವನ್ನು ಸಾಗಿಸುತ್ತಿದ್ದ ಬ್ಯಾರೆಲ್‌ಗಳು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಈ ಘಟನೆ ನಡೆದಿದೆ. ನ್ಯೂಯಾರ್ಕ್ ಟೈಮ್ಸ್ ಪ್ರಕಾರ..ಸುಮಾರು 2,000 ಜನಸಂಖ್ಯೆಯನ್ನು ಹೊಂದಿರುವ ಸೋ ಲೊರೆಂಕೊ ಡಿ ಬೈರೊ ಎಂಬ ಪುಟ್ಟ ಪಟ್ಟಣದಲ್ಲಿ ಭಾನುವಾರ ಕಡಿದಾದ ರಸ್ತೆಗಳ ಮೂಲಕ ಕೆಂಪು ಬಣ್ಣದ ವೈನ್‌ ಹರಿದಿದೆ ಎಂದು ವರದಿ ಮಾಡಿದೆ. ರಸ್ತೆಯಷ್ಟೇ ಅಲ್ಲದೆ ತಗ್ಗು ಪ್ರದೇಶಗಳ ಮನೆಗಳಿಗೂ ವೈನ್‌ ನುಗ್ಗಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಲೆವಿರಾ ಡಿಸ್ಟಿಲರಿ ಅಧಿಕಾರಿಗಳು ಜನರ ಕ್ಷಮೆಯಾಚಿಸಿದೆ. ಮೊದಲು ಹರಿಯುತ್ತಿರುವ ವೈನ್ ಅನ್ನು ನಿಲ್ಲಿಸಲು ಅಧಿಕಾರಿಗಳು ಹಠಾತ್ತನೆ ಫೀಲ್ಡಿಗಿಳಿದರು. ಅನಾಡಿಯಾ ಅಗ್ನಿಶಾಮಕ ಇಲಾಖೆಯು ಹರಿಯುತ್ತಿದ್ದ ವೈನ್‌ ಅನ್ನು ಸ್ಥಗಿತಗೊಳಿಸಿ, ದೂರದಲ್ಲಿದ್ದ ಹೊಲವೊಂದಕ್ಕೆ ಹರಿಬಿಟ್ಟಿದ್ದಾಗಿ ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!