ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣೇಶ ಚತುರ್ಥಿ ಬಂತೆಂದರೆ ಇಡೀ ದೇಶದಲ್ಲಿ ಸಂಭ್ರಮ ಸಡಗರು. ಪ್ರತಿ ಮನೆ, ಗಲ್ಲಿ ಗಲ್ಲಿಯಲ್ಲೂ ಡೊಳ್ಳು ಹೊಟ್ಟೆ ಗಣಪನ ಕೂರಿಸಿ ಮೆರವಣಿಗೆ ಮಾಡೋದೇ ಒಂದು ಮಹಾದ್ಭುತ. ಮಂಟಪಗಳನ್ನು ಸುಂದರವಾಗಿ ಅಲಂಕರಿಸಿ ಪೂಜಿಸಲಾಗುತ್ತದೆ. ದೇಶದೆಲ್ಲೆಡೆ ಗಣೇಶನ ಹಬ್ಬ ಆಚರಿಸಿದರೂ ಮುಂಬೈ ನಗರದಲ್ಲಿ ಈ ಹಬ್ಬ ಬಹಳ ವಿಶೇಷವೆಂದೇ ಹೇಳಬೇಕು.
ಏಕೆಂದರೆ ವ್ಯಕ್ತಿಯೊಬ್ಬ ಗಣೇಶನಿಗೆ ಬೃಹತ್ ಗಾತ್ರದ ಚಿನ್ನದ ಆಭರಣಗಳನ್ನು ತಯಾರಿಸುತ್ತಾನೆ. ಸಂಜಯ್ ನಾನಾ ವೇದಿಕ್ ಎಂಬ ಆಭರಣ ವ್ಯಾಪಾರಿ ಗಣೇಶನ ಆಕಾರಕ್ಕೆ ತಕ್ಕಂತೆ ಆಭರಣಗಳನ್ನು ತಯಾರಿಸುವುದರಲ್ಲಿ ನಿಪುಣ. ನಾನಾ ವೇದಿಕ್, ದೊಡ್ಡ ಹಾರ ಮತ್ತು ಕಿರೀಟಗಳಂತಹ ಅನೇಕ ರೀತಿಯ ಆಭರಣಗಳನ್ನು ಈ ಬಾರಿಯೂ ತಯಾರಿಸಿದ್ದಾನೆ.
ಮುಂಬೈನಲ್ಲಿ ಅವರನ್ನು ʻನಾನಾʼ ಎಂತಲೇ ಕರೆಯುತ್ತಾರೆ. ಸಂಜಯ್ ಸುಮಾರು ಎರಡು ದಶಕಗಳಿಂದ ಗಣೇಶ ಮೂರ್ತಿಗಳಿಗೆ ಚಿನ್ನದ ಆಭರಣಗಳನ್ನು ತಯಾರಿಸುತ್ತಿದ್ದಾರೆ. ಪ್ರತಿ ವರ್ಷ ವಿನಾಯಕ ಮೂರ್ತಿಗಳನ್ನು ಇಡುವ ಮೊದಲು, ಆಭರಣಗಳಿಗಾಗಿ ಆರ್ಡರ್ ಕೊಡಲಾಗುತ್ತದೆ. ವಿಗ್ರಹದ ಎತ್ತರ, ಅಗಲಕ್ಕೆ ತಕ್ಕಂತೆ ನಿಖರ ಅಳತೆ ತೆಗೆದುಕೊಂಡು ಆಭರಣ ಮಾಡುವುದು ನಾನಾ ವಿಶೇಷತೆ.
ಮುಂಬೈ ಮಾತ್ರವಲ್ಲದೆ ದೇಶ-ವಿದೇಶಗಳ ಅನೇಕ ದೇವಾಲಯಗಳ ವಿಗ್ರಹಗಳಿಗೆ ವಿವಿಧ ಆಭರಣಗಳನ್ನು ತಯಾರಿಸಲಾಗುತ್ತದೆ. ಕೈ ಕಡಗ, ಹಾರ, ಕಿರೀಟ, ಕಿವಿಯೋಲೆ, ಜಂಧ್ಯಂ, ಅಭಯಹಸ್ತ, ಲಾಕೆಟ್, ಕೈ ಬಳೆ ಹೀಗೆ ನಾನಾ ಬಗೆಯ ಆಭರಣಗಳನ್ನು ತಯಾರಿಸುವಲ್ಲಿ ನಾನಾ ಸಿದ್ಧಸ್ತರು. ಮೂರು ತಲೆಮಾರುಗಳಿಂದ ಈ ಕೆಲಸದಲ್ಲಿ ತೊಡಗಿರುವ ನಾನಾ ಮುಂಬೈನಲ್ಲಿ ನಾಲ್ಕು ಮಳಿಗೆಗಳನ್ನು ಹೊಂದಿದ್ದಾರೆ. ಸುಮಾರು 17 ಅಕ್ಕಸಾಲಿಗರು ಈ ಆಭರಣಗಳನ್ನು ತಯಾರಿಸುತ್ತಾರೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ವಿಗ್ರಹಗಳ ಆರ್ಡರ್‌ಗಳು ಬರುತ್ತವೆ. ಆರ್ಡರ್ ನೀಡಿದವರು ನೀಡಿದ ಅಳತೆಗೆ ಅನುಗುಣವಾಗಿ ನಾನಾ ಆಭರಣಗಳನ್ನು ಮಾಡುತ್ತಾರೆ.