ಈ ಪತ್ರೆಗಳಿಂದ ಗಣಪತಿಯನ್ನು ಪೂಜಿಸಿ, ಭಗವಂತನ ಕೃಪೆಗೆ ಪಾತ್ರರಾಗಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಕ್ತಾದಿಗಳು ಗಣಪತಿ ದೇವರನ್ನು ಪ್ರಾರ್ಥಿಸಿದರೆ, ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ನೆರವೇರುತ್ತವೆ. ಗಣೇಶನನ್ನು ಪೂಜಿಸಿದರೆ ಮನೆಯಲ್ಲಿ ಸಂಪತ್ತಿಗೂ ಕೊರತೆಯಾಗುವುದಿಲ್ಲ ಎಂಬ ನಂಬಿಕೆ ಇದೆ. ಅದರಲ್ಲೂ ಗಣೇಶ ಚತುರ್ಥಿಯಂದು ವಿವಿಧ ಬಗೆಯ ಪತ್ರೆಗಳಿಂದ ಪೂಜಿಸದರೆ ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ ಎಂದು ಹೇಳಲಾಗುತ್ತದೆ.

ಪತ್ರೆ ಸಾಮಾನ್ಯ ಎಲೆಯಲ್ಲ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಅದರಿಂದ ಬರುವ ಗಾಳಿ ನಮ್ಮಲ್ಲಿರುವ ರೋಗರುಜಿನಗಳನ್ನು ದೂರ ಮಾಡುತ್ತದೆ.

1. ಮಾಚಿ ಪತ್ರೆ: ಸೇವಂತಿ ಹೂವಿನ ಜಾತಿಗೆ ಸೇರಿದ ಈ ಎಲೆಗಳು ಪರಿಮಳಯುಕ್ತವಾಗಿವೆ. ತಲೆನೋವು, ಚರ್ಮದ ಸಮಸ್ಯೆ ಮತ್ತು ಸ್ನಾಯು ನೋವಿನಿಂದ ಬಳಲುತ್ತಿರುವವರು ಬಳಸಿದರೆ ಪ್ರಯೋಜನವಾಗುತ್ತದೆ. ಇದು ಗಣೇಶನಿಗೂ ಪ್ರಿಯವಾದದ್ದು.

2. ಗರಿಕೆ : ಬಿಳಿ ಗರಿಕೆ ಮತ್ತು ಕಪ್ಪು ಗರಿಕೆ ಎಂದು ಎರಡು ವಿಧವಿದೆ. ಇವು ವಿಘ್ನೇಶ್ವರನಿಗೆ ಬಹಳ ಇಷ್ಟವಾಗುತ್ತವೆ. ಔಷಧೀಯ ಗುಣಗಳು ಪ್ರಬಲವಾಗಿವೆ. ಈ ಎಲೆಯು ದೇಹದ ಮೇಲಿನ ಗಾಯಗಳು ಮತ್ತು ವಿವಿಧ ಅಲರ್ಜಿಗಳನ್ನು ತಡೆಯುವ ಗುಣವನ್ನು ಹೊಂದಿದೆ.

3. ತುಳಸಿ: ಶಿವ ಕೇಶವನಿಗೆ ತುಳಸಿ ಎಂದರೆ ಪ್ರಾಣ. ಔಷಧೀಯ ಗುಣಗಳು ಪ್ರಬಲವಾಗಿವೆ. ತುಳಸಿ ಎಲೆಗಳಿಂದ ಗಣೇಶನನ್ನು ಪೂಜಿಸುವುದು ಮಂಗಳಕರ. ತುಳಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಕೆಮ್ಮು, ಶೀತ ಮತ್ತು ಜ್ವರವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ.

4. ಬಿಲ್ವ ಪತ್ರೆ:  ಭಗವಾನ್ ಶಿವನಿಗೆ ಪ್ರಿಯವಾದ ಎಲೆ. ಇದರಿಂದ ಗಣೇಶನನ್ನೂ ಪೂಜಿಸುತ್ತಾರೆ. ಮಧುಮೇಹ, ಅತಿಸಾರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ನಿಯಂತ್ರಿಸಲು ಈ ಎಲೆಯನ್ನು ಬಳಸಲಾಗುತ್ತದೆ.

5. ಮಾವಿನ ಎಲೆ: ಮಾವಿನ ತೋರಣವಿಲ್ಲದೆ ಪೂಜೆ ಇಲ್ಲ. ಈ ಮಾವಿನ ಎಲೆಗಳಲ್ಲಿ ಅನೇಕ ಔಷಧಿಗಳಿವೆ. ಮನೆಗೂ ಒಳ್ಳೆಯದು. ಚರ್ಮದ ಮೇಲೆ ರಕ್ತಸ್ರಾವ ಮತ್ತು ದದ್ದುಗಳನ್ನು ಕಡಿಮೆ ಮಾಡುತ್ತದೆ. ಈ ಎಲೆಯನ್ನು ಹೊಸ್ತಿಲ ಮೇಲೆ ಇಟ್ಟರೆ ಕ್ರಿಮಿಕೀಟಗಳು ಮನೆಯೊಳಗೆ ಬರದಂತೆ ತಡೆಯುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!