ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸ್ತುತ ಹೆಣ್ಣುಮಕ್ಕಳ ಫ್ಯಾಷನ್ ಗೋಜಿನಿಂದಾಗಿ ತಹರೇವಾರಿ ವಿನ್ಯಾಸ ಬಟ್ಟೆಗಳು ಮಾರುಕಟ್ಟೆಯನ್ನಾವರಿಸಿವೆ. ಅಂದವಾಗಿ ಕಾಣಲು ಎಷ್ಟೇ ಕಷ್ಟವಾದರೂ ಬೇಕಾದ ಬಟ್ಟೆ ಧರಿಸುತ್ತಾರೆ. ಅವುಗಳಲ್ಲಿ ಟೈಟ್ ಜೀನ್ಸ್ ಹಾಗೂ ಲೆಗ್ಗಿಂಗ್ಸ್ ಕೂಡ ಒಂದು.
ಇವುಗಳನ್ನು ಧರಿಸುವುದರಲ್ಲಿ ತಪ್ಪೇನಿಲ್ಲ ಆದರೆ..ಬಿಗಿಯಾದ ಬಟ್ಟೆ ಧರಿಸುವುದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಎಂಬುದು ಖಚಿತವಾಗಿ ತಿಳಿದಿರಬೇಕು.
ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಕೆಲವು ತೊಂದರೆಗಳು ಉಂಟಾಗಬಹುದು. ಒತ್ತಡದ ಭಾವನೆ.. ಚರ್ಮದ ಮೇಲೆ ಕೆಂಪು ಕಲೆಗಳು, ಕಿರಿಕಿರಿ, ಮರಗಟ್ಟುವಿಕೆ, ಸರಿಯಾಗಿ ಓಡಾಡಲು ಸಾಧ್ಯವಾಗದಿರುವುದು, ಉಸಿರಾಟದ ತೊಂದರೆ, ಹೊಟ್ಟೆಯ ಕೆಳಭಾಗದಲ್ಲಿ ನೋವು ಇತರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಬಿಗಿಯಾದ ಪ್ಯಾಂಟ್, ಲೆಗ್ಗಿಂಗ್ಸ್, ಬೆಲ್ಟ್ ಮತ್ತು ಬಿಗಿಯಾದ ಬ್ರಾಗಳನ್ನು ಧರಿಸುವುದರಿಂದ ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತವೆ. ಬಿಗಿಯಾದ ಜೀನ್ಸ್ ಹೊಟ್ಟೆ ಮತ್ತು ಕರುಳಿನ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡಬಹುದು. ಇದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್‌ನಂತಹ ರೋಗಲಕ್ಷಣಗಳನ್ನು ಉಲ್ಬಣಗೊಳಿಸುತ್ತದೆ. ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ದೇಹದ ಕೆಲವು ಭಾಗಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಬಿಗಿಯಾದ ಸ್ಕಿನ್ನಿ ಜೀನ್ಸ್ ‘ಮೆರಾಲ್ಜಿಯಾ ಪ್ಯಾರೆಸ್ಟೆಟಿಕಾ’ ಎಂಬ ನರಗಳ ಕಾಯಿಲೆಗೆ ಕಾರಣವಾಗಬಹುದು. ಇದು ತೊಡೆಯ ಹೊರ ಭಾಗದಲ್ಲಿ ಸೆಳೆತ ಮತ್ತು ನೋವನ್ನು ಉಂಟುಮಾಡುತ್ತದೆ.
ಹಾಗಾಗಿ ಸೌಂದರ್ಯಕ್ಕೆ ಎಷ್ಟೇ ಪ್ರಾಮುಖ್ಯತೆ ಕೊಟ್ಟರೂ.. ನಮ್ಮ ದೇಹದ ಆರೋಗ್ಯವನ್ನೂ ಕಾಪಾಡಬೇಕು. ಅದಕ್ಕಾಗಿ ಯಾವಾಗಲೂ ಆರಾಮದಾಯಕವಾದ ಬಟ್ಟೆಗಳನ್ನು ಧರಿಸುವುದು ಬಹಳ ಮುಖ್ಯ.