ಹಿಂದು ಧರ್ಮ ಜಗತ್ತಿಗೆ ಅಪಾಯಕಾರಿ: ಮತ್ತೊಂದು ವಿವಾದಕ್ಕೆ ಕಿಡಿ ಹಚ್ಚಿದ ಡಿಎಂಕೆ ಸಂಸದ ಎ. ರಾಜಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಹಿಂದು ಧರ್ಮವು ಅಪಾಯಕಾರಿಯಾಗಿದೆ ಎಂದು ಡಿಎಂಕೆ ಸಂಸದ ಎ. ರಾಜಾ ನೀಡಿದ ಹೇಳಿಕೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ಇತ್ತೀಚೇಗಷ್ಟೇ ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳ ಈಗಾಗಲೇ ವಿವಾದ ಕಿಡಿ ಹಚ್ಚಿದ್ದು,ಇದೀಗ ಈ ನಡುವೆಯೇ ಡಿಎಂಕೆ ಸಂಸದ ಎ.ರಾಜಾ ಆನ್‌ಲೈನ್‌ ಸಂವಾದದಲ್ಲಿ ಮಾತನಾಡುತ್ತಾ ಹಿಂದು ಧರ್ಮವು ಜಗತ್ತಿಗೆ ಅಪಾಯಕಾರಿ ಎಂದು ಹೇಳಿಕೆ ನೀಡಿದ್ದಾರೆ.

ಈ ಕುರಿತು ವಿಡಿಯೋ ತುಣುಕನ್ನು ಮಂಗಳವಾರ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಬಿಡುಗಡೆ ಮಾಡಿದ್ದಾರೆ. ಆ ವಿಡಿಯೋದಲ್ಲಿ ಸಂಸದ ಎ ರಾಜಾ ಅವರು, ” ಜಾತಿಗಳ ಹೆಸರಿನಲ್ಲಿ ಜಾಗತಿಕ ರೋಗಕ್ಕೆ ಭಾರತವೇ ಕಾರಣ. ಜಾತಿಯ ಆಧಾರದ ಮೇಲೆ ಜನರನ್ನು ವಿಭಜಿಸುತ್ತಿದ್ದಾರೆ. ವಿದೇಶಗಳಲ್ಲಿ ವಾಸಿಸುವ ಭಾರತೀಯರು ಸಹ ಜಾತಿಗಳ ಹೆಸರಿನಲ್ಲಿ ಹಿಂದೂ ಧರ್ಮವನ್ನು ಪ್ರಚಾರ ಮಾಡುತ್ತಿದ್ದಾರೆ. ಆದ್ದರಿಂದ ಹಿಂದು ಧರ್ಮವು ಭಾರತಕ್ಕೆ ಮಾತ್ರವಲ್ಲ, ಈಗ ಇಡೀ ಜಗತ್ತಿಗೆ ದೊಡ್ಡ ಅಪಾಯವಾಗಿದೆ ” ಹೇಳಿದ್ದಾರೆ

ಡಿಎಂಕೆ ನಾಯಕನ ಮೇಲೆ ಅಣ್ಣಾಮಲೈ ಕಿಡಿ
ವಿಡಿಯೋ ಜತೆ ವಾಗ್ದಾಳಿ ನಡೆಸಿದ ಅಣ್ಣಾಮಲೈ, ” ಹಿಂದು ಧರ್ಮವು ಭಾರತ ಮತ್ತು ಜಗತ್ತಿಗೆ ಅಪಾಯ ಎಂದು ಕರೆದಿದ್ದಾರೆ. ಹಿಂದು ಧರ್ಮ ಜಾತಿ ವಿಭಜನೆ ಮತ್ತು ದ್ವೇಷವನ್ನು ಸೃಷ್ಟಿಸಲು ಪ್ರಮುಖ ಕಾರಣವಾಗಿದೆ ಎಂದು ಡಿಎಂಕೆ ಸಂಸದರು ಹೇಳಿದ್ದಾರೆ. ಈ ಮೂಲಕ ತಾವು ಮಾಡಿದ ಅವ್ಯವಸ್ಥೆಗೆ ಸನಾತನ ಧರ್ಮವನ್ನು ದೂಷಿಸುವ ಧೈರ್ಯವನ್ನು ಪ್ರದರ್ಶಿಸಿದ್ದಾರೆ ” ಎಂದು ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!