ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸೈನಿಕರನ್ನು ರಕ್ಷಿಸಲು ಹೋಗಿ ಭಾರತೀಯ ಸೇನೆಯ ಶ್ವಾನ ಕೆಂಟ್ ಮೃತಪಟ್ಟಿದೆ.
ನಾರ್ಲಾ ಗ್ರಾಮದಲ್ಲಿ ನಡೆದ ಎನ್‌ಕೌಂಟರ್ ವೇಳೆ ಯೋಧನನ್ನು ರಕ್ಷಿಸುವ ವೇಳೆ ಆರು ವರ್ಷದ ಶ್ವಾನ ಕೆಂಟ್ ಮೃತಪಟ್ಟಿದೆ. ಭಾರೀ ಗುಂಡಿನ ದಾಳಿ ಮಧ್ಯೆ ಕೆಂಟ್ ಸಿಕ್ಕಿಹಾಕಿಕೊಂಡಿದ್ದು, ಉಗ್ರರ ಗುಂಡೇಟಿಗೆ ಮೃತಪಟ್ಟಿದೆ.
ಕೆಂಟ್ 21ನೇ ಆರ್ಮಿ ಡಾಗ್, ಲ್ಯಾಬ್ರಡಾರ್ ತಳಿಯ ಹೆಣ್ಣು ನಾಯಿಯಾಗಿದ್ದು, ಯೋಧನನ್ನು ಉಳಿಸುವ ವೇಳೆ ಪ್ರಾಣತ್ಯಾಗ ಮಾಡಿದೆ,