BEAUTY TIPS| ತ್ವಚೆಯ ಅನೇಕ ಸಮಸ್ಯೆಗಳಿಗೆ ಪರಿಹಾರ ಕಡಲೆ ಹಿಟ್ಟಿನ ಪವರ್‌ಫುಲ್ ಫೇಸ್‌ಪ್ಯಾಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತ್ವಚೆಯನ್ನು ಹೆಚ್ಚು ಅಂದವಾಗಿ ಇಟ್ಟುಕೊಳ್ಳಬೇಕು ಎಂಬುದು ಬಹುತೇಕ ಮಹಿಳೆ ಮತ್ತು ಪುರುಷರ ಆಲೋಚನೆಯಾಗಿರುತ್ತದೆ. ಹೀಗಿರುವಾಗ ಕೆಲವೊಮ್ಮೆ ತ್ವಚೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಕಾಡತೊಡಗುತ್ತವೆ. ಅಂತಹ ಸಮಯದಲ್ಲಿ ಮನೆಯಲ್ಲಿ ಪರಿಹಾರ ಕಂಡುಕೊಳ್ಳಲು ಬಯಸುವವರಿಗಾಗಿ ಇಲ್ಲಿದೆ ಉಪಯುಕ್ತ ಮಾಹಿತಿ.

ಉತ್ತಮ ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ಬಳಸಲಾಗುವ ಸೌಂದರ್ಯವರ್ಧಕಗಳಲ್ಲೊಂದು ಕಡಲೆಹಿಟ್ಟು. ಕಡಲೆ ಹಿಟ್ಟು ಮುಖದಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸುತ್ತದೆ, ಎಣ್ಣೆಯಂಶ ಹೋಗಲಾಡಿಸುತ್ತದೆ, ಎಕ್ಸ್‌ಫೋಲೆಟ್‌ ಮಾಡಲು ಇದನ್ನು ಬಳಸಲಾಗುತ್ತದೆ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ಕೆಲವರ ಮುಖದ ಮೇಲೆ ಕೂದಲಿರುತ್ತದೆ. ಅದನ್ನು ಹೋಗಲಾಡಿಸಲು ಕಡಲಿನ ಹಿಟ್ಟಿನ ಪ್ಯಾಕ್‌ ಅನ್ನು ಬಳಸಬಹುದು. ಇಂತಹ ಅನೇಕ ಸಮಸ್ಯೆಗಳನ್ನು ಹೋಗಲಾಡಿಸುವ ಪವರ್‌ಫುಲ್‌ ಪ್ಯಾಕ್‌ಗಳನ್ನು ಇಲ್ಲಿ ನೀಡಲಾಗಿದೆ.

ಮುಖದಲ್ಲಿ ಕಪ್ಪು ಕಲೆಗಳಿದ್ದರೆ– ಒಂದು ಚಮಚ ಲೋಳೆಸರ, ಒಂದು ಚಮಚ ಕಡಲೆಹಿಟ್ಟು ಮಿಶ್ರ ಮಾಡಿ ಪೇಸ್ಟ್‌ ಮಾಡಿಕೊಂಡು ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆಯಿರಿ. ಇದರಿಂದ ಕಪ್ಪುಕಲೆಗಳು ಮಾಯವಾಗುತ್ತದೆ.

ಮುಖದಲ್ಲಿ ಹೆಚ್ಚು ಮೊಡವೆ ಇದ್ದರೆ – ಎರಡು ಚಮಚ ಕಡಲೆಹಿಟ್ಟು, ಅದಕ್ಕೆ ಸ್ವಲ್ಪ ಅರಿಶಿಣಪುಡಿ, ಸ್ವಲ್ಪ ರೋಸ್‌ ವಾಟರ್‌ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದರಿಂದ ಕ್ರಮೇಣ ಮೊಡವೆ ಕಡಿಮೆಯಾಗುತ್ತದೆ.

ಮುಖದಲ್ಲಿ ಎಣ್ಣೆ ಅಂಶ ಕಂಡುಬಂದರೆ – ಎರಡು ಚಮಚ ಮುಲ್ತಾನಿ ಮಿಟಿ, 1 ಚಮಚ ಕಡಲೆ ಹಿಟ್ಟು, ರೋಸ್‌ ವಾಟರ್‌ ಹಾಕಿ ಮಿಕ್ಸ್ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 10 ನಿಮಿಷದ ನಂತರ ಮುಖ ತೊಳೆಯಿರಿ. ಈ ರೀತಿ ಮಾಡಿದರೆ ಜಿಡ್ಡಿನಂಶ ಕಡಿಮೆಯಾಗುತ್ತದೆ.

ಮುಖದಲ್ಲಿ ನೆರಿಗೆಯಿದ್ದರೆ – 2 ಚಮಚ ಕಡಲೆಹಿಟ್ಟು, ಒಂದು ಟೊಮೆಟೊ ಹಣ್ಣಿನ ರಸದ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ನಂತರ ಮುಖ ತೊಳೆಯಿರಿ. ಈ ರೀತಿ ಮಾಡಿದರೆ ಮುಖದ ನೆರಿಗೆ ತಡೆಗಟ್ಟಬಹುದು.

ಮುಖ ತುಂಬಾ ಡ್ರೈ ಆಗ್ತಿದ್ಯಾ? – ಹಣ್ಣಾದ ಬಾಳೆಹಣ್ಣು ತೆಗೆದು ಕಿವುಚಿ ಅದಕ್ಕೆ ಕಡಲೆಹಿಟ್ಟು, ಸ್ವಲ್ಪ ಹಾಲು ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆಯಿರಿ.

ಮುಖದ ರಂಧ್ರ ಕಡಿಮೆಯಾಗಲು – ಒಂದು ಮೊಟ್ಟೆಯ ಬಿಳಿಗೆ , ಅರ್ಧ ಚಮಚ ಜೇನು, 1 ಚಮಚ ಕಡಲೆ ಹಿಟ್ಟು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆಯಿರಿ.

ಸ್ಕಿನ್‌ ಪಿಗ್ಮೆಂಟೇಷನ್ ಸಮಸ್ಯೆ – ಒಂದು ಮೊಟ್ಟೆಯ ಬಿಳಿಗೆ ಒಂದು ಚಮಚ ಕಡಲೆಹಿಟ್ಟು, ಅರ್ಧ ಚಮಚ ಜೇನು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!