ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಡುಗೆ ಮನೆ ಎಲ್ಲರಿಗೂ ಶಕ್ತಿಯ ಸ್ಥಳವಾಗಿದೆ. ಏಕೆಂದರೆ ನಾವು ತಿನ್ನುವ ಆಹಾರ ಅಲ್ಲಿಂದಲೇ ತಯಾರಾಗುತ್ತದೆ. ನಾವು ತಿನ್ನುವ ಆಹಾರವು ಶುಚಿ ಮತ್ತು ರುಚಿಕರವಾಗಿರಬೇಕು ಎಂದು ಬಯಸುವುದು ತಪ್ಪಲ್ಲ. ಆದರೆ ನಾವು ತಯಾರಿಸುವ ಆಹಾರವು ಶುಚಿಯಾಗಿ ಮತ್ತು ರುಚಿಯಾಗಿರಬೇಕಾದರೆ, ಅಡುಗೆಮನೆಯು ಸಹ ಸ್ವಚ್ಛವಾಗಿರಬೇಕು. ರುಚಿ ರುಚಿಯಾಗಿ ಮಾಡುವ ಖಾದ್ಯಗಳಿಗಾಗಿ ಮನುಷ್ಯರಷ್ಟೇ ಅಲ್ಲ, ನೊಣಗಳೂ ಬರುತ್ತವೆ. ಅವುಗಳನ್ನು ತಪ್ಪಿಸಲು ಕೆಲವು ಮುನ್ನೆಚ್ಚರಿಕೆಗಳು ಮತ್ತು ಸಲಹೆಗಳನ್ನು ಅನುಸರಿಸಿದರೆ ಸಾಕು.
- ಲ್ಯಾವೆಂಡರ್, ನೀಲಗಿರಿ, ಪುದೀನಾ, ಬೇವು ಮತ್ತು ನಿಂಬೆ ತೈಲಗಳು ಮನೆಯಲ್ಲಿರುವ ಕೀಟಗಳನ್ನು ಓಡಿಸುತ್ತವೆ. ಈ ಎಣ್ಣೆಗಳನ್ನು ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಯಲ್ಲಿ ತುಂಬಿಸಬೇಕು. ಸಿಂಕ್ ಸುತ್ತಲೂ, ನೊಣ ಕೂರುವ ಜಾಗದಲ್ಲಿ ಸಿಂಪಡಿಸಿದರೆ ನೊಣ ಬರುವುದಿಲ್ಲ.
- ನೀರನ್ನು ಸೇರಿಸದೆ ಅರಿಶಿನ ಮತ್ತು ಉಪ್ಪು ಸೇರಿಸಿ. ಅಡುಗೆ ಮನೆಯ ಸ್ಲಾಬ್ ಮೇಲೆ ಸಿಂಪಡಿಸಿ. ಒಣಗಿದ ನಂತರ ಅದನ್ನು ಒರೆಸಿ ನೊಣಗಳು ಮತ್ತು ಸೊಳ್ಳೆಗಳನ್ನು ದೂರವಿಡಿ.
- ಎರಡು ಕಪ್ ನೀರು ಕುದಿಸಿ ಉಪ್ಪು ಮತ್ತು ಮೆಣಸು ಪುಡಿ ಸೇರಿಸಿ. ತಣ್ಣಗಾದ ನಂತರ ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಸ್ಲ್ಯಾಬ್ ಮೇಲೆ ಸಿಂಪಡಿಸಬೇಕು. ನೊಣಗಳು ಮತ್ತು ಸೊಳ್ಳೆಗಳು ಬರುವುದಿಲ್ಲ.
- ಬೆಳ್ಳುಳ್ಳಿಯನ್ನು ಕುಟ್ಟಿ ಒಂದು ಕಪ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು ತುಂಬಾ ಪರಿಣಾಮಕಾರಿ.
ಅಡುಗೆ ಕೋಣೆಗೆ ನೊಣ, ಸೊಳ್ಳೆ, ಜಿರಳೆ ಬರದಂತೆ ಸ್ವಚ್ಛತೆ ಅನುಸರಿಸಬೇಕು. ಅಡುಗೆ ಮಾಡಿದ ನಂತರ, ಗ್ಯಾಸ್ ಸುತ್ತಲೂ ಬಿದ್ದ ತರಕಾರಿ ತುಂಡುಗಳು, ಎಣ್ಣೆ ಮತ್ತು ಆಹಾರ ಪದಾರ್ಥಗಳನ್ನು ಗೆತೆದು ಚೆನ್ನಾಗಿ ಒರೆಸಬೇಕು. ಇವೆಲ್ಲವುಗಳ ಇರುವಿಕೆ ನೊಣಗಳ ಅಪಾಯವನ್ನುಂಟುಮಾಡುತ್ತದೆ.