‘ಚಕ್ ದೇ ಇಂಡಿಯಾ’ ಚಿತ್ರ ಖ್ಯಾತಿಯ ನಟ ರಿಯೋ ಕಪಾಡಿಯಾ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ನಟ ರಿಯೋ ಕಪಾಡಿಯಾ (66) ನಿಧನರಾಗಿದ್ದಾರೆ.

ಅವರ ಸಾವಿನ ಸುದ್ದಿಯನ್ನು ಅವರ ಸ್ನೇಹಿತ ಫೈಸಲ್ ಮಲಿಕ್ ದೃಢಪಡಿಸಿದ್ದಾರೆ. ರಿಯೋ ಅವರ ಅಂತಿಮ ವಿಧಿಗಳು ಸೆಪ್ಟೆಂಬರ್ 15, 2023ರಂದು ಗೋರೆಗಾಂವ್ ನ ಶಿವ ಧಾಮ್ ಶಂಶಾನ್ ಭೂಮಿಯಲ್ಲಿ ನಡೆಯಲಿದೆ.
ದಿಲ್ ಚಾಹ್ತಾ ಹೈ, ಚಕ್ ದೇ ಇಂಡಿಯಾ, ಮರ್ದಾನಿ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಮೃತರು ಪತ್ನಿ ಮರಿಯಾ ಫರಾಹ್, ಮಕ್ಕಳಾದ ಅಮನ್ ಮತ್ತು ವೀರ್ ಅವರನ್ನ ಅಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!