ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯಾ ಒಕ್ಕೂಟವು ರಿಪಬ್ಲಿಕ್ ಸುದ್ದಿ ವಾಹಿನಿಯ ಅರ್ನಬ್ ಗೋಸ್ವಾಮಿ ಸೇರಿ 14 ಪತ್ರಕರ್ತರ ಕಾರ್ಯಕ್ರಮಗಳಿಗೆ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂಬುದಾಗಿ ಪ್ರಕಟಣೆ ಹೊರಡಿಸಿದೆ.
ಇಂಡಿಯಾ ಒಕ್ಕೂಟದ ಮಾಧ್ಯಮ ವಿಭಾಗದ ಸಭೆ ನಡೆದಿದ್ದು, ಈ ವೇಳೆ ದೇಶದ ಪ್ರಮುಖ ಸುದ್ದಿ ಸಂಸ್ಥೆಗಳ ಪತ್ರಕರ್ತರು, ಸಂಪಾದಕರು, ನಿರೂಪಕರು ನಡೆಸಿಕೊಡುವ ಶೋಗಳಿಗೆ ಇಂಡಿಯಾ ಒಕ್ಕೂಟದ ಪಕ್ಷಗಳ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದೆ. ಇದೀಗ ಇಂಡಿಯಾ ಒಕ್ಕೂಟದ ತೀರ್ಮಾನದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
The following decision was taken by the INDIA media committee in a virtual meeting held this afternoon. #JudegaBharatJeetegaIndia #जुड़ेगा_भारत_जीतेगा_इण्डिया pic.twitter.com/561bteyyti
— Pawan Khera 🇮🇳 (@Pawankhera) September 14, 2023
ಅರ್ನಬ್ ಗೋಸ್ವಾಮಿ (ರಿಪಬ್ಲಿಕ್)
ನಾವಿಕಾ ಕುಮಾರ್ (ಟೈಮ್ಸ್ ನೌ)
ಅದಿತಿ ತ್ಯಾಗಿ (ಜೀ ನ್ಯೂಸ್)
ಅಮನ್ ಚೋಪ್ರಾ (ನ್ಯೂಸ್ 18)
ಆಮಿಷ್ ದೇವಗನ್ (ನ್ಯೂಸ್ 18)
ಆನಂದ್ ನರಸಿಂಹನ್ (ನ್ಯೂಸ್ 18)
ಅಶೋಕ್ ಶ್ರೀವಾಸ್ತವ್ (ಡಿಡಿ ನ್ಯೂಸ್)
ಸುಧೀರ್ ಚೌಧರಿ (ಆಜ್ ತಕ್)
ಚಿತ್ರಾ ತ್ರಿಪಾಠಿ (ಆಜ್ ತಕ್)
ರುಬಿಕಾ ಲಿಯಾಕತ್ (ಭಾರತ್ 24)
ಗೌರವ್ ಸಾವಂತ್ (ಇಂಡಿಯಾ ಟುಡೇ)
ಶಿವ್ ಅರೂರ್ (ಇಂಡಿಯಾ ಟುಡೇ)
ಪ್ರಾಚಿ ಪರಾಶರ್ (ಇಂಡಿಯಾ ಟಿವಿ)
ಸುಶಾಂತ್ ಸಿನ್ಹಾ (ಟೈಮ್ಸ್ ನೌ ನವಭಾರತ್)