ಪೊಲೀಸ್​ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ: ಶೀಘ್ರವೇ 2,454 ವಿವಿಧ ಹಂತದ ಹುದ್ದೆ ಭರ್ತಿ ಮಾಡುತ್ತೇವೆ ಎಂದ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪೊಲೀಸರಿಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಹೇಳಿದರು.

ಬೆಂಗಳೂರಿನ ಪೊಲೀಸ್ (Police) ಪ್ರಧಾನ ಕಚೇರಿಯಲ್ಲಿ ನಡೆದ ಅಧಿಕಾರಿಗಳ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು ‘ ಶೀಘ್ರವೇ 2,454 ವಿವಿಧ ಹಂತದ ಪೊಲೀಸ್ ಹುದ್ದೆ ಭರ್ತಿ ಮಾಡುತ್ತೇವೆ . ಇದರ ಜೊತೆಗೆ ಹೊಸದಾಗಿ 5 ಸಂಚಾರಿ ಠಾಣೆ, 6 ಮಹಿಳಾ ಠಾಣೆ ತೆರೆಯಲಾಗುವುದು ಎಂದಿದ್ದಾರೆ.

ನಿಮ್ಮ ವ್ಯಾಪ್ತಿಗಳಲ್ಲಿ ಅಪರಾಧ ನಿಯಂತ್ರಣ ಆಗದಿದ್ರೆ ಡಿಸಿಪಿ, ಎಸ್​​ಪಿ ಅವರೇ ನೇರ ಹೊಣೆಯಾಗಲಿದ್ದಾರೆ. ಒಳ್ಳೆ ಕೆಲಸ ಮಾಡುವ ಅಧಿಕಾರಿಗಳಿಗೆ ಸಹಕಾರ, ಪ್ರೋತ್ಸಾಹ ನಮ್ಮ ಸರ್ಕಾರ ನೀಡುತ್ತದೆ. ಕರ್ತವ್ಯಲೋಪ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ಇದೇ ವೇಳೆ ಡ್ರಗ್ಸ್​​ನಿಂದ ಯುವ ಸಮುದಾಯ ಹಾಳಾಗುತ್ತಿದೆ. ಡ್ರಗ್ಸ್​​ ನಿರ್ಮೂಲನೆ ಒಂದು ಅಭಿಯಾನದ ರೀತಿಯಲ್ಲಿ ಆಗಬೇಕು. ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳಲು ಬಿಡಬಾರದು ಎಂದರು.

ಹೊಸ ವಾಹನಗಳ ಖರೀದಿಗೆ ಪೊಲೀಸ್​ ಇಲಾಖೆಗೆ 100 ಕೋಟಿ ರೂಪಾಯಿಗೆ ಮುಂದಿನ ಕ್ಯಾಬಿನೆಟ್​ನಲ್ಲಿ ಅನುದಾನಕ್ಕೆ ಅನುಮೋದನೆ ನೀಡಲಾಗುವುದು ಎಂದಿದ್ದಾರೆ. ಪೊಲೀಸ್​ ಸಿಬ್ಬಂದಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ನೈತಿಕ ಪೊಲೀಸ್​ಗಿರಿ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!