ಇಂದು ʼಯಶೋಭೂಮಿʼ ಉದ್ಘಾಟಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೆಹಲಿಯ ದ್ವಾರಕಾದಲ್ಲಿ ನಿರ್ಮಿಸಲಾಗಿರುವ ‘ಯಶೋಭೂಮಿ’ ಹೆಸರಿನ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್​ ಸೆಂಟರ್​​ (ಐಐಸಿಸಿ)ಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಯಶೋಭೂಮಿಯು ವಿಶ್ವದ ಅತಿದೊಡ್ಡ ಸಭೆಗಳು, ಸಮ್ಮೇಳನಗಳು ಮತ್ತು ಪ್ರದರ್ಶನಾಲಯಗಳನ್ನು ನಡೆಸಬಹುದಾದ ಸೌಲಭ್ಯಗಳನ್ನು ಒಳಗೊಂಡಿದೆ. ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್​ ಸೆಂಟರ್ ಎಂದೂ ಕರೆಯಲ್ಪಡುವ ಯಶೋಭೂಮಿಯು ಒಟ್ಟು 8.9 ಲಕ್ಷ ಚದರ ಮೀಟರ್‌ ಪ್ರದೇಶ ಹೊಂದಿದೆ.

ಸುಮಾರು 5.400 ಕೋಟಿ ರೂ. ವೆಚ್ಚದಲ್ಲಿ ಯಶೋಭೂಮಿಯನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ಅತ್ಯಂತ ಭವ್ಯವಾದ ಕನ್ವೆನ್ಷನ್ ಸೆಂಟರ್, ಬಹು ಪ್ರದರ್ಶನ ಸಭಾಂಗಣಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿದೆ.

73 ಸಾವಿರ ಚದರ ಮೀಟರ್‌ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ನಿರ್ಮಿಸಲಾದ ಕನ್ವೆನ್ಶನ್ ಸೆಂಟರ್, ಮುಖ್ಯ ಸಭಾಂಗಣ, ಗ್ರ್ಯಾಂಡ್ ಬಾಲ್ ರೂಂ ಮತ್ತು 11 ಸಾವಿರ ಪ್ರತಿನಿಧಿಗಳು ಒಟ್ಟಿಗೆ ಸೇರಬಹುದಾದ 13 ಸಭೆ ಕೊಠಡಿಗಳು, 15 ಕನ್ವೆನ್ಶನ್ ಕೊಠಡಿಗಳನ್ನು ಒಳಗೊಂಡಿದೆ.
ಸುಮಾರು 6 ಸಾವಿರ ಅತಿಥಿಗಳು ಏಕಕಾಲಕ್ಕೆ ಕುಳಿತುಕೊಳ್ಳಬಹುದಾದ ಆಸನ ಸಾಮರ್ಥ್ಯವನ್ನು ಹೊಂದಿದೆ. ಭವ್ಯವಾದ ಬಾಲ್ ರೂಮ್‌ಗಳನ್ನು ಹೊಂದಿದ್ದು, ಸುಮಾರು 2,500 ಅತಿಥಿಗಳಿಗೆ ಆತಿಥ್ಯ ನೀಡಬಹುದು.

ಇದರೊಂದಿಗೆ ದ್ವಾರಕ ಸೆಕ್ಟರ್‌ 21ರಿಂದ ದ್ವಾರಕಾ ಸೆಕ್ಟರ್‌ 25ರ ವರೆಗೆ ವಿಸ್ತರಿಸಲಾಗಿರುವ ದೆಹಲಿ ಏರ್‌ಪೋರ್ಟ್‌ ಮೆಟ್ರೊ ಎಕ್ಸ್‌ಪ್ರೆಸ್‌ ಮಾರ್ಗವನ್ನೂ ಇಂದು ಅವರು ಉದ್ಘಾಟಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!