Tuesday, December 23, 2025

ಫ್ಯಾನ್ಸ್ ವಾರ್ ನಡುವೆ ದರ್ಶನ್ ನೋಡಲು ಜೈಲಿಗೆ ಪತ್ನಿ ವಿಜಯಲಕ್ಷ್ಮಿ, ಸಹೋದರ ಭೇಟಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ವಾರ್ ನಡೆಯುತ್ತಿರುವ ಮದ್ಯೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನ ನೋಡಲು ಇಂದು ಪರಪ್ಪನ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ತಮ್ಮ ದಿನಕರ್ ಭೇಟಿ ನೀಡಿದ್ದಾರೆ.

ಕಳೆದ ವಾರವಷ್ಟೇ ಡೆವಿಲ್ ಚಿತ್ರ ರಿಲೀಸ್ ಆಗಿದೆ. ಇದರ ನಡುವೆ ಸುದೀಪ್ ಮಾತಿನಿಂದ ಹೊರಗಡೆ ಕಿಚ್ಚ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ಶುರುವಾಗಿದೆ. ಈ ಘಟನೆಯ ನಂತರ ಇಂದು ಮೊದಲ ಬಾರಿಗೆ ವಿಜಯಲಕ್ಷ್ಮಿ, ದರ್ಶನ್ ಅವರನ್ನು ಭೇಟಿ ಮಾಡಿದ್ದು, ಕೆಲಹೊತ್ತು ಮಾತನಾಡಿದ್ದಾರೆ.

ಈ ವೇಳೆ ಹೊರಗೆ ನಡೆಯುತ್ತಿರುವ ವಿದ್ಯಮಾನಗಳ ಕುರಿತು ವಿಜಯಲಕ್ಷ್ಮಿ, ದರ್ಶನ್ ಜೊತೆ ಚರ್ಚೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಜಯಲಕ್ಷ್ಮಿ ದರ್ಶನ್ ಜೊತೆಗೆ ಸಹೋದರ ದಿನಕರ್ ತೂಗುದೀಪ ಸಹ ಜೈಲಿಗೆ ಭೇಟಿ ನೀಡಿದ್ದು, ಏನೆಲ್ಲ ವಿಚಾರವನ್ನು ಚರ್ಚೆ ಮಾಡಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

error: Content is protected !!