ಉಭಯ ಸದನಗಳು ಮುಂದೂಡಿಕೆ: ನಾಳೆಯಿಂದ ಹೊಸ ಸಂಸತ್ ಭವನದಲ್ಲಿ ಕಲಾಪ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸುಧೀರ್ಘ 75 ವರ್ಷಗಳ ಸಂಸತ್ ಪಯಣ ಇಂದು ಮುಕ್ತಾಯಗೊಂಡಿದ್ದು, ಲೋಕಸಭೆ ಹಾಗೂ ರಾಜ್ಯಸಭೆ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಮಂಗಳವಾರ ಮಧ್ಯಾಹ್ನ ಹೊಸ ಸಂಸತ್ ಭವನದಲ್ಲಿ ಮತ್ತೆ ಕಲಾಪ ಪುನರ್ ಆರಂಭವಾಗಲಿದೆ. ಹೊಸ ಸಂಸತ್ ಕಟ್ಟಡದ ಮೇಲ್ಮನೆ ಚೇಂಬರ್ ನಲ್ಲಿ ಮಧ್ಯಾಹ್ನ 2:15 ಕ್ಕೆ ರಾಜ್ಯಸಭೆ ಸಮಾವೇಶಗೊಂಡರೆ, ಕೆಳಮನೆ ಕೊಠಡಿಯಲ್ಲಿ ಮಧ್ಯಾಹ್ನ 1:15 ಕ್ಕೆ ಲೋಕಸಭೆ ಕಲಾಪ ಆರಂಭವಾಗಲಿದೆ.

ಸೋಮವಾರ ಉಭಯ ಸದನಗಳಲ್ಲಿ, ಸಂಸದರು ‘ಸಂವಿಧಾನ ಸಭೆಯಿಂದ ಆರಂಭವಾದ 75 ವರ್ಷಗಳ ಸಂಸತ್ತಿನ ಪಯಣ, ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆಗಳ’ ಕುರಿತು ಚರ್ಚೆ ನಡೆಸಿದರು.

ಲೋಕಸಭೆ ಶುರುವಾದಾಗ ಚರ್ಚೆಯನ್ನು ಆರಂಭಿಸಿದ ಪ್ರಧಾನಿ ಮೋದಿ, ಸ್ವಾತಂತ್ಯ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ, ಪಿವಿ ನರಸಿಂಹರಾವ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಮತ್ತು ನಂತರದ ನಾಯಕರ ದೂರದೃಷ್ಟಿಯನ್ನು ಶ್ಲಾಘಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!