ಜಂಕ್ ಫುಡ್ ರುಚಿ ಬಗ್ಗೆ ಬೇರೆ ಮಾತಿಲ್ಲ, ಅದರ ಟೇಸ್ಟ್ ಮನೆಯಲ್ಲಿ ಮಾಡೋ ಅಡುಗೆಯಲ್ಲಿ ಸಿಗೋದೇ ಇಲ್ಲ. ಹೊರಗಡೆ ಜಂಕ್ ಫುಡ್ ತಿಂದಾಗ ಆಗೋ ಖುಷಿ ಮನೆಯ ರೊಟ್ಟಿ ಅನ್ನ ಸಾರಿನಲ್ಲಿ ಇಲ್ಲ. ಆದರೆ ಈ ಜಂಕ್ಫುಡ್ ನಿಮ್ಮ ದೇಹಕ್ಕೆ ಏನು ಮಾಡ್ತಿದೆ? ತಿನ್ನೋದು ನಿಲ್ಲಿಸಬೇಕು ಆದರೂ ನಿಲ್ಲಿಸೋಕೆ ಆಗೋದಿಲ್ಲ ಎಂದರೆ ಈ ಟಿಪ್ಸ್ ನಿಮಗೆ ಸಹಾಯ ಆಗಲಿದೆ..
- ಜಾಸ್ತಿ ನೀರು ಕುಡಿಯೋಕೆ ಆರಂಭಿಸಿ, ಬಾಯಾರಿಕೆಯನ್ನು ಹಸಿವು ಎಂದುಕೊಂಡು ಜಂಕ್ ಫುಡ್ ತಿನ್ನೋದು ಜಾಸ್ತಿ
- ಪ್ರೋಟೀನ್ ಇರುವ ಆಹಾರ ತಿನ್ನಿ, ಇದು ಜಾಸ್ತಿ ಸಮಯದವರೆಗೂ ನಿಮ್ಮ ಹಸಿವನ್ನು ತಡೆಯುತ್ತದೆ.
- ಜಂಕ್ ಫುಡ್ ತಿನ್ನುವವರಿಂದ ಸ್ವಲ್ಪ ದೂರ ಇರಿ, ಅವರು ತಿನ್ನುವ ವೇಳೆ ಅಲ್ಲೇ ಇದ್ರೆ ತಿನ್ನೋದು ಗ್ಯಾರೆಂಟಿ
- ಸ್ವಲ್ಪ ಹಸಿವಾದಂತೆ ತಿಂದುಬಿಡಿ, ಜಾಸ್ತಿ ಹಸಿವು ಮಾಡಿಕೊಂಡ್ರೆ ಈಸಿಯಾಗಿ ಸಿಗುವ ಜಂಕ್ ಫುಡ್ ತಿಂದುಬಿಡೋಣ ಎನಿಸುತ್ತದೆ.
- ಒತ್ತಡದ ಜೀವನಶೈಲಿ ಇದ್ದರೆ ಬದಲಾಯಿಸಿ, ಅಡುಗೆ ಮಾಡೋಕೆ ಸಮಯವೇ ಇಲ್ಲವಾದ್ರೆ ಹೊರಗೆ ತಿನ್ನೋದು ಮಾಮೂಲಿ
- ಒಳ್ಳೆಯ ನಿದ್ದೆ, ವ್ಯಾಯಾಮ ಮಾಡಿ
- ಒಂದೇ ಬಾರಿ ಎಲ್ಲ ತಿಂದುಬಿಡೋ ಬದಲು ಆಗಾಗ ಸ್ವಲ್ಪ ಸ್ವಲ್ಪ ತಿಂತಾ ಇರಿ.
- ಚೆನ್ನಾಗಿ ಅಗಿದು ತಿನ್ನಬೇಕು
- ನಿಮ್ಮಿಷ್ಟದ ಜಂಕ್ ಫುಡ್ ಸ್ಟಾಕ್ ಮನೆಯಲ್ಲಿ ಇದ್ದರೆ ಅದನ್ನು ಮೊದಲು ಎತ್ತಿಡಿ, ಮನೆಯಲ್ಲಿ ಜಂಕ್ ಫುಡ್ ಬರೋದೇ ಬೇಡ.