ವಿನಾಯಕ ವಿಗ್ರಹ ಪ್ರತಿಷ್ಠಾಪನೆ ವಿಚಾರವಾಗಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶಾದ್ಯಂತ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ..ಜಾತಿ, ಧರ್ಮದ ಭೇದವಿಲ್ಲದೆ ಗಣೇಶನ ಆಚರಣೆ ನಡೆಯುತ್ತಿದೆ. ಆದರೆ, ಕೆಲವೆಡೆ ಗಲಾಟೆ, ಘರ್ಷಣೆಗಳೂ ನಡೆಯುತ್ತಿವೆ.

ಆಂಧ್ರಪ್ರದೇಶದಲ್ಲಿ ವಿನಾಯಕ ಮೂರ್ತಿ ವಿಚಾರವಾಗಿ ಸಣ್ಣಪುಟ್ಟ ವಿವಾದ ಉಂಟಾಗಿ ವ್ಯಕ್ತಿ ಹೆಣ ಉರುಳಿರುವ ಘಟನೆ ಶ್ರೀ ಸತ್ಯಸಾಯಿ ಜಿಲ್ಲೆಯ ಮುಡಿಗುಬ್ಬ ಮಂಡಲದ ದೊರಗಿಲ್ಲು ಎಂಬಲ್ಲಿ ನಡೆದಿದೆ. ಗ್ರಾಮದ ಬಿ.ಸಿ.ಕ್ವಾರ್ಟರ್ಸ್ ನಲ್ಲಿ ಗಣೇಶನ ವಿಗ್ರಹಕ್ಕೆ ಕೂರಿಸುವ ವಿಚಾರಕ್ಕೆ ಯುವಕರು ಜಗಳವಾಡಿದ್ದಾರೆ.

ಈ ಮಾರಾಮಾರಿ ಗ್ರಾಮದ ಜನರು ಎರಡು ಗುಂಪುಗಳಾಗಿ ಒಡೆದು ದೊಣ್ಣೆಗಳಿಂದ ಹಲ್ಲೆ ನಡೆಸುವವರೆಗೂ ಸಾಗಿತ್ತು. ಈ ದಾಳಿಯಲ್ಲಿ ಅನಂತಯ್ಯ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅನಂತಯ್ಯ ಅವರ ಮೃತ ದೇಹವನ್ನು ಕದಿರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘರ್ಷಣೆ ಹಾಗೂ ಕೊಲೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!