ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ದಿನಗಳಲ್ಲಿ ವಿಶ್ವಕಪ್ ಆರಂಭವಾಗಲಿದ್ದು, ಈಗಾಗಲೇ ಸಾಕಷ್ಟು ಹೈಪ್ ಕ್ರಿಯೇಟ್ ಆಗಿದೆ.
ಆದರೆ ವಿಶ್ವಕಪ್ ಮೇಲೆ ಮತ್ತೆ ಮ್ಯಾಚ್ ಫಿಕ್ಸಿಂಗ್ ಕರಿನೆರಳು ಬಿದ್ದಿದೆ.
ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಅನ್ವಯ ನಡೆಯುವ ಅಬುಧಾಬಿ ಟಿ-10 ಲೀಗ್‌ನಲ್ಲಿ ಒಟ್ಟು ಎಂಟು ಮಂದಿ ಅಕ್ರಮ ಎಸಗಿದ್ದಾರೆ ಎಂದು ಐಸಿಸಿ ಆರೋಪಿಸಿದೆ. ಇದರಲ್ಲಇ ಮೂವರು ಭಾರತೀಯರು ಇದ್ದಾರೆ!
ಟಿ-10 ಲೀಗ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿರುವುದನ್ನು ಐಸಿಸಿ ದೃಢಪಡಿಸಿದ್ದು, ಆರೋಪಿಗಳ ವಿರುದ್ಧ ತನಿಖೆ ಆರಂಭಿಸಿದೆ. ಬಾಂಗ್ಲಾದೇಶದ ಮಾಜಿ ಆಲ್‌ರೌಂಡರ್ ನಾಸಿರ್ ಹುಸೇನ್ ಸೇರಿದಂತೆ ಎಂಟು ಮಂದಿಯ ಹೆಸರುಗಳು ಕೇಳಿಬಂದಿದೆ.
ಭಾರತದ ಅಧಿಕಾರಿಗಳಾದ ಕೃಷ್ಣನ್ ಕುಮಾರ್ ಚೌಧರಿ, ಪರಾಗ್ ಸಾಂಘ್ವಿ, ಬ್ಯಾಟಿಂಗ್ ಕೋಚ್ ಸನ್ನಿ ಧಿಲ್ಲೋನ್ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ.
2021ರ ಟಿ-10 ಲೀಗ್‌ನ ಕೆಲವು ಪಂದ್ಯಗಳನ್ನು ಫಿಕ್ಸಿಂಗ್ ಮಾಡಲು ಪ್ರಯತ್ನಿಸಲಾಗಿದೆ. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಐಸಿಸಿ ಹೇಳಿದೆ. ಭಾರತದ ಮೂವರ ವಿರುದ್ಧ ಆರೋಪಗಳು ಪ್ರಬಲವಾಗಿದ್ದು, ತನಿಖೆಗೆ ಸಹಕರಿಸದೆ ಸತ್ಯ ಮರೆಮಾಚಿದ ಆರೋಪವೂ ಎದುರಾಗಿದೆ.
ಹಲವು ವರ್ಷಗಳ ಹಿಂದೆ ಐಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು, ಇದೀಗ ಮತ್ತೆ ಮ್ಯಾಚ್ ಫಿಕ್ಸಿಂಗ್ ದೃಢಪಟ್ಟಿದ್ದು, ಆರೋಪಿಗಳ ವಿರುದ್ಧ ತನಿಖೆ ಆರಂಭವಾಗಿದೆ,