ಪ್ರೆಗ್ನೆನ್ಸಿಯಲ್ಲಿ ಮೃದುವಾಗಿ, ಸೊಂಪಾಗಿ ಹೊಳೆಯುವ ಕೂದಲು ಪರ್ಮನೆಂಟ್ ಅಲ್ಲ. ಮಗು ಹುಟ್ಟಿದ ನಾಲ್ಕು ತಿಂಗಳಿನಲ್ಲಿ ಕೂದಲು ಉದುರುವಿಕೆ ಆರಂಭವಾಗುತ್ತದೆ.
ಮಗು ಆಗಿನ್ನೂ ಜನರನ್ನು ನೋಡಲು, ಅವರ ಮಾತಿಗೆ ಸ್ಪಂದಿಸಲು ಆರಂಭಿಸಿರುತ್ತದೆ. ಯಾರು ನಗಿಸಿದರೂ ಕಿಲಕಿಲನೆ ನಗುತ್ತದೆ. ಮಗು ನಕ್ಕಷ್ಟು ಕೂದಲು ಉದುರುತ್ತದೆ ಎಂದು ದೊಡ್ಡವರು ಹೇಳ್ತಾರೆ.
ಆದರೆ, ಕೂದಲು ಉದುರಲು ಮಗುವಿನ ನಗು ಕಾರಣವಲ್ಲ. ದೇಹದಲ್ಲಿ ಈಸ್ಟ್ರೋಜನ್ ಪ್ರಮಾಣ ತಗ್ಗುವುದರಿಂದ ಕೂದಲು ಉದುರುತ್ತದೆ. ಆದರೆ ಈ ರೀತಿ ಕೂದಲ ಉದುರುವಿಕೆ ಪರ್ಮನೆಂಟ್ ಅಲ್ಲ. ದಿನಕಳೆದಂತೆ ಕೂದಲು ಮತ್ತೆ ಬೆಳೆಯುತ್ತದೆ. ಕೆಲವರಿಗೆ ಮುಂಚೆ ಇದ್ದ ಕೂದಲಿಗಿಂತಲೂ ಚಂದದ ದಟ್ಟವಾದ ಕೂದಲು ಬರುತ್ತದೆ.
ಪೋಸ್ಟ್‌ಪಾರ್ಟಮ್‌ನಲ್ಲಿ ಕೂದಲು ಉದುರುವಿಕೆಗೆ ಯಾವುದೇ ಮೆಡಿಸಿನ್ ಅಥವಾ ಟ್ರೀಟ್‌ಮೆಂಟ್ ಇಲ್ಲ. ತಾಳ್ಮೆಯಿಂದ ಕಾಯಬೇಕಷ್ಟೆ. ಆರೋಗ್ಯಕರವಾದ ಬ್ಯಾಲೆನ್ಸ್ ಡಯಟ್ ಫಾಲೋ ಮಾಡುವುದು, ಕಣ್ತುಂಬ ನಿದ್ದೆ, ವಿಟಮಿನ್ಸ್ ಮಿನರಲ್ಸ್ ಸೇವನೆ ಮಾಡಬಹುದು.
ಎದೆಹಾಲನ್ನು ಕೂದಲ ಬುಡಕ್ಕೆ ಹಚ್ಚಿ ಮಸಾಜ್ ಮಾಡಬಹುದು. ಅದರಲ್ಲಿರುವ ಆಂಟಿಬಾಡಿಗಳು ಕೂದಲನ್ನು ಗಟ್ಟಿಮಾಡುತ್ತವೆ.