JOB| ಎನ್‌ಐಎನ್‌ ನೇಮಕಾತಿ: 69 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN) ನಲ್ಲಿ ಕಿರಿಯ ವೈದ್ಯಾಧಿಕಾರಿ, ಫೀಲ್ಡ್ ವರ್ಕರ್, ಎಸ್‌ಆರ್‌ಎಫ್, ಪ್ರಾಜೆಕ್ಟ್‌ ಅಸಿಸ್ಟೆಂಟ್‌ ಮತ್ತು ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗಳು ಸೇರಿದಂತೆ 69 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಎಂಬಿಬಿಎಸ್, ಬಿಎಎಂಎಸ್, ಬಿಡಿಎಸ್, ಎಂ.ಎಸ್ಸಿ, DMLT, B.Sc ನರ್ಸಿಂಗ್, MLT ನಲ್ಲಿ ಪದವಿ, 12ನೇ ತರಗತಿ, ವಿಜ್ಞಾನದಲ್ಲಿ ಪದವಿ ಜೊತೆಗೆ ನೇಮಕಾತಿ ನಿಯಮಾನುಸಾರ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 18,000/- ರಿಂದ 60,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ [email protected] ವಿಳಾಸಕ್ಕೆ ಮೇಲ್‌ ಮಾಡುವ ಮೂಲಕ ಸೆಪ್ಟೆಂಬರ್ 25,2023ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!