ಕಾವೇರಿ ನೀರಿಗಾಗಿ ಹೋರಾಟ: ಕೊನೆಗೂ ಅಖಾಡಕ್ಕೆ ಇಳಿದ ಸ್ಯಾಂಡಲ್ ವುಡ್ ಸ್ಟಾರ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಡ್ಯ ಭಾಗದ ರೈತರು ಕಾವೇರಿ (Cauvery ) ಹೋರಾಟದಲ್ಲಿ ತೊಡಗಿಕೊಂಡಿದ್ದು, ಆದ್ರೆ ಎಷ್ಟು ದಿನ ಯಾವುದೇ ಕನ್ನಡದ ಸಿನಿ ತಾರೆಯರು ಹೋರಾಟಕ್ಕೆ ಸಾಥ್ ನೀಡಲಿಲ್ಲ. ಇದರಿಂದ ಸಾಮಜಿಕ ಜಾಲತಾಣದಲ್ಲಿ ಆಕ್ರೋಶವು ವ್ಯಕ್ತವಾಗಿತ್ತು. ಇದೀಗ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.

ಹಿರಿಯ ನಟಿ, ಮಂಡ್ಯ ಕ್ಷೇತ್ರದ ಸಂಸದೆಯೂ ಆಗಿರುವ ಸುಮಲತಾ ಅಂಬರೀಶ್ (Sumalatha Ambarish) ಅವರು ನಿರಂತರವಾಗಿ ರೈತರ ಹೋರಾಟಗಳಿಗೆ ಬೆಂಬಲ ಸೂಚಿಸುತ್ತಾ ಬಂದಿದ್ದಾರೆ. ಜಲಶಕ್ತಿ ಸಚಿವರನ್ನು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ನಿನ್ನೆಯಷ್ಟೇ ಭೇಟಿ ಮಾಡಿ ಕ್ಷೇತ್ರದ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೇ, ನೇರವಾಗಿ ಅವರು ಹೋರಾಟಕ್ಕೂ ಇಳಿದಿದ್ದರು.

ಇಂದು ಬೆಳಗ್ಗೆ ನಟ ದರ್ಶನ್ (Darshan) ಟ್ವೀಟ್ ಮಾಡಿ, ‘ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ, ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ’ ಎಂದು ಬರೆದಿದ್ದಾರೆ .

ಸುದೀಪ್ (Sudeep) ಕೂಡ ಟ್ವೀಟ್ ಮಾಡಿದ್ದು, ‘ಸ್ನೇಹಿತರೆ, ನಮ್ಮ ಕಾವೇರಿ ನಮ್ಮ ಹಕ್ಕು. ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ . ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ . ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ’ ಎಂದು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ .

ಇನ್ನು ರಾಘವೇಂದ್ರ ರಾಜ್ ಕುಮಾರ್ (Raghavendra Rajkumar) , ‘ನಮ್ಮ ಕುಟುಂಬ ಮತ್ತು ಚಿತ್ರರಂಗಕ್ಕೆ ನಾಡು ನುಡಿಯ ವಿಚಾರದಲ್ಲಿ ಹೋರಾಟಕ್ಕೆ ಯಾವಾಗಲೂ ಮುಂದು. ಫಿಲ್ಮ್ ಚೇಂಬರ್ ಕರೆಗಾಗಿ ನಾವು ಕಾಯುತ್ತಿದ್ದೇವೆ. ಹೋರಾಟದಲ್ಲಿ ಹಿಂದೆ ಸರಿಯುವ ಪ್ರಶ್ನೆಯೂ ಇಲ್ಲವೆಂದು’ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!