ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ತೀವ್ರ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕಾರ್ಕಳ ತಾಲೂಕು ಸೇರ್ಪಡೆಯಾಗಿದೆ. ಹೆಚ್ಚು ಮಳೆ ಬೀಳುವ ಆಗುಂಬೆಯ ಮಡಿಲಿನಲ್ಲೇ ಇರುವ ಕಾರ್ಕಳ ಬರಪೀಡಿತವಾಗಿದ್ದು, ಈ ಬಾರಿ ಮಳೆ ಕೊರತೆಯ ತೀವ್ರತೆ ಕಾಣಿಸಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಂಕಿ ಅಂಶಗಳ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಉಡುಪಿಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಮಳೆ ದಾಖಲಾಗಿತ್ತು. ಅಷ್ಟೇ ಅಲ್ಲದೇ ಆಗುಂಬೆ ನಂತರ ರಾಜ್ಯದಲ್ಲಿ ಹೆಚ್ಚು ಮಳೆಯಾಗುತ್ತಿದ್ದದ್ದು ಕಾರ್ಕಳದಲ್ಲೇ. ಆದರೆ ಈ ಬಾರಿ ಮಳೆಯೇ ಆಗದೇ ತೀವ್ರ ಬರಗಾಲಪೀಡಿದ ಪ್ರದೇಶಗಳ ಪಟ್ಟಿಗೆ ಕಾರ್ಕಳ ಸೇರಿದೆ.