ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ, ಹೇಗಿದೆ ಸಂಭ್ರಮಾಚರಣೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉಭಯ ಸದನಗಳಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಅಂಗೀಕಾರವಾದ ಬಳಿಕ ದೇಶದ ಹಲವೆಡೆ ಸಂಭ್ರಮಾಚರಣೆ ನಡೆಯುತ್ತಿದೆ. ಪ್ರಧಾನಿ ಮೋದಿ ನಾಯಕತ್ವವನ್ನು ದೇಶದ ಜನ ಹಾಗೂ ರಾಜಕೀಯ ನಾಯಕರು ಪ್ರಶಂಸಿಸುತ್ತಿದ್ದಾರೆ. ಇಂದು ಬೆಳಗ್ಗೆ ದೆಹಲಿ ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಬಿಜೆಪಿ ಕಾರ್ಯಕರ್ತರು ಮತ್ತು ಇತರೆ ಮಹಿಳೆಯರು ಸಂಭ್ರಮಾಚರಣೆಚರಣೆಯಲ್ಲಿ ತೊಡಗಿದರು.

“ಈ ಬಿಲ್‌ಗಾಗಿ 27 ವರ್ಷಗಳಿಂದ ಕಾಯಲಾಗಿತ್ತು … ಐತಿಹಾಸಿಕ ಯುಗ ಪ್ರಾರಂಭವಾಗಿದೆ. ಮಸೂದೆಯನ್ನು ಸುವರ್ಣ ಯುಗದಲ್ಲಿ ಅಂಗೀಕರಿಸಲಾಗಿದೆ. ಇದು ಮಹಿಳೆಯರಿಗೆ ದೊಡ್ಡ ದಿನ” ಎಂದು ಅಲ್ಲಿದ್ದ ಮಹಿಳೆಯರೊಬ್ಬರು ಹೇಳಿದರು. ಜೊತೆಗೆ ಬಿಜೆಪಿ ಪ್ರಧಾನ ಕಛೇರಿಯ ಹೊರಗೆ ಕಲಾವಿದರು ಸಂಗೀತ ವಾದ್ಯಗಳನ್ನು ನುಡಿಸಿದರು.

ಮಹಿಳಾ ಮೀಸಲಾತಿ ಮಸೂದೆ ಕುರಿತು ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ” ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿಗಾಗಿ ನಾವು ಹಲವು ವರ್ಷಗಳಿಂದ ಕಾಯುತ್ತಿದ್ದೆವು. ಆ ಕನಸು ಇದೀಗ ಈಡೇರಿದೆ. ನಾನು ಪ್ರತಿ ಪಕ್ಷಕ್ಕೂ ಧನ್ಯವಾದ ಹೇಳುತ್ತೇನೆ ಎಂದರು.

ಮಹಿಳಾ ಮೀಸಲಾತಿ ಮಸೂದೆಗೆ ಅಂಗೀಕಾರ ದೊರೆತಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯರಿಗೆ ಮಹಿಲೆಯರು ಧನ್ಯವಾದ ತಿಳಿಸಿದರು. ಬಿಜೆಪಿ ಕಚೇರಿಯಲ್ಲಿ ಹೂವಿನ ಹಾರ ಹಾಕಿ ನಮಸ್ಕರಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!