– ಮೇಘನಾ ಶೆಟ್ಟಿ, ಶಿವಮೊಗ್ಗ
ಮದುವೆಯಾಗುವ ಹುಡುಗಿ ಬೆಳ್ಳಗಿರಬೇಕು, ತೂಕ ಜಾಸ್ತಿ ಇರಬಾರದು, ಕಣ್ಣುಗಳು ಸುಂದರವಾಗಿರಬೇಕು, ಹೀಗೆ ನಮ್ಮ ಹುಡುಗರ ಲಿಸ್ಟ್ ಉದ್ದುದ್ದ ಆಗುತ್ತಲೇ ಹೋಗುತ್ತದೆ. ಎಲ್ಲರೂ ಅಲ್ಲ ಕೆಲವರಿಗೆ ತೆಳ್ಳಗೆ ಬೆಳ್ಳಗೆ ಇರುವ ಹುಡುಗಿಯೇ ಈಗಲೂ ರೋಲ್ ಮಾಡೆಲ್.
ಆದರೆ ಈ ಹಳ್ಳಿಯಲ್ಲಿ ಸಣ್ಣಗಿರೋರನ್ನು ಹಳ್ಳಿಯ ಒಳಕ್ಕೂ ಬಿಟ್ಟುಕೊಳ್ಳೋದಿಲ್ಲ. ಹಳ್ಳಿಯಲ್ಲಿ ಸೆಟಲ್ ಆಗಬೇಕು ಅಂದ್ರೆ ಮಿನಿಮಮ್ 200 ಪೌಂಡ್ಸ್ ಇರಬೇಕು, ಅಂದ್ರೆ 90 ಕೆಜಿ ಅಷ್ಟೇ!
ಹೌದು, ಥೈಲೆಂಡ್‌ನ ಫುಟೆಕ್‌ನಲ್ಲಿ ಇರುವ ಈ ಹಳ್ಳಿಯಲ್ಲಿ ದಪ್ಪಗಿರುವ ಹೆಣ್ಣುಮಕ್ಕಳನ್ನು ಸುಂದರಿಯರೆಂದು ಪರಿಗಣಿಸಲಾಗುತ್ತದೆ. ತೂಕ ಹೆಚ್ಚಾದಷ್ಟೂ, ದಪ್ಪವಾಗಿ ಕಾಣಿಸಿದಷ್ಟು ಮಹಿಳೆಗೆ ಪ್ರಾಮುಖ್ಯತೆ ಜಾಸ್ತಿ!
130 ಕೆಜಿ: ಇಡೀ ಹಳ್ಳಿಯಲ್ಲಿ ಎಲ್ಲಿಯೂ 200 ಪೌಂಡ್ಸ್‌ಗಿಂತ ಕಡಿಮೆ ಇರುವ ಮಹಿಳೆಯರನ್ನು ನೋಡೋದಕ್ಕೆ ಸಾಧ್ಯವೇ ಇಲ್ಲ. ಪುರುಷರು ಕೂಡ ಹೀಗೆ ಇರ‍್ತಾರಾ? ಖಂಡಿತಾ ಇಲ್ಲ, 130 ಕೆಜಿಯಷ್ಟು ತೂಕವಿರುವ ಪತ್ನಿಯನ್ನು ನೋಡಿಕೊಳ್ಳಲು ಪತಿ ಸಣ್ಣಗೆ ಇರಬೇಕು. ಇಲ್ಲಿ ಮಹಿಳೆ ದಪ್ಪ ಇಲ್ಲ ಎಂದಾದರೆ ಅವರನ್ನು ಮದುವೆ ಕೂಡ ಮಾಡಿಕೊಳ್ಳೋದಿಲ್ಲ.
ನೆಚ್ಚಿನ ಹವ್ಯಾಸ ಎಂದರೆ… ಅಷ್ಟೇ ಅಲ್ಲ ಇಲ್ಲಿನ ಮಹಿಳೆಯರಿಗೆ ತಾವು ತೂಕ ಹೆಚ್ಚಿದ್ದೇವೆ ಎನ್ನುವ ಯಾವುದೇ ಮುಜುಗರ ಇಲ್ಲ. ಇವರು ಯಾವ ಕೆಲಸ ಕೂಡ ಮಾಡೋದಿಲ್ಲ. ಮಾಮೂಲಿಯಾಗಿ ತಿಂದಿದ್ದನ್ನು ಕರಗಿಸಲು ಜನ ಹೇಗೆ ವರ್ಕೌಟ್ ಮಾಡಿ ನಿಭಾಯಿಸ್ತಾರೋ ಹಾಗೇ ಇವರು ತಿಂದಿದ್ದು, ಒಂದು ಚೂರು ಕರಗದ ಹಾಗೇ ಮ್ಯಾನೇಜ್ ಮಾಡ್ತಾರೆ. ಊಟ ಮಾಡಿದ ತಕ್ಷಣವಾಗಲಿ, ತದನಂತರವಾಗಲಿ ಇವರು ಓಡಾಡೋದಿಲ್ಲ. ಕೂತಲ್ಲೇ ಕೂತು ತಮ್ಮ ತೂಕ ಕಡಿಮೆಯಾಗದಂತೆ ನೋಡಿಕೊಳ್ತಾರೆ. ಇವರ ನೆಚ್ಚಿನ ಹವ್ಯಾಸ ಎಂದರೆ ಇಷ್ಟಪಟ್ಟು ಅಡುಗೆ ಮಾಡುವುದು, ತಿನ್ನುವುದು, ಕೂತಲ್ಲೇ ಕೂರುವುದು!
ಅಡುಗೆ ಮಾಡ್ತಾರೆ, ತಿಂತಾನೇ ಇರ‍್ತಾರೆ: ಮಹಿಳೆಯರಿಗೆ ಮಾಡಲು ಏನೂ ಕೆಲಸ ಇಲ್ಲದ ಕಾರಣ ಮತ್ತೆ ಅಡುಗೆ ಮಾಡ್ತಾರೆ, ತಿಂತಾನೇ ಇರ‍್ತಾರೆ. ತಿಂಡಿ ನಂತರ ಸ್ನ್ಯಾಕ್ಸ್, ಮತ್ತೆ ಊಟ, ಮತ್ತೆ ಸ್ನ್ಯಾಕ್ಸ್ ಹೀಗೆ.. ಬೋರಾದಾಗಲೆಲ್ಲ ತಿನ್ನುತ್ತಲೇ ಇರ‍್ತಾರೆ. ಎಲ್ಲವೂ ಹೈ ಕ್ಯಾಲೊರಿ ಆಹಾರವೇ! ಮನೆಯಲ್ಲಿ ಮಹಿಳೆಯರಿಗೆ ಹೆಚ್ಚು ತಿನ್ನಬೇಡ, ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ದೊಡ್ಡವರು ಹೇಳೋದಿಲ್ಲ. ಇನ್ನೂ ಹೆಚ್ಚು ತಿನ್ನಲು ಪ್ರೋತ್ಸಾಹ ನೀಡ್ತಾರೆ. ಒಬ್ಬರಿಗೆ ಒಂದು ಹೊತ್ತಿಗೆ 10 ಮೊಟ್ಟೆ, ಬ್ರೆಡ್, ಫ್ರೈಡ್ ಚಿಕನ್, ಅನ್ನ ಎಲ್ಲವೂ ಬೇಕು. ಇದು ತಿಂಡಿಯಲ್ಲ, ಊಟವೂ ಅಲ್ಲ ಸ್ನ್ಯಾಕ್ಸ್ ಅಷ್ಟೆ!
ಇಲ್ಲಿ ಮನೆಗಳೂ ಚಿಕ್ಕದು : ಇಲ್ಲಿ ಮನೆಗಳೂ ಕೂಡ ಚಿಕ್ಕದಾಗಿಯೇ ಇರುತ್ತವೆ. ಮಹಿಳೆಯರು ಪದೇ ಪದೆ ಎದ್ದು ಹಾಲ್‌ಗೂ ರೂಮ್‌ಗೂ ಅಡುಗೆ ಮನೆಗೂ ಓಡಾಡುತ್ತಲೇ ಇದ್ದರೆ ತೂಕ ಕಡಿಮೆ ಆಗುವ ಸಾಧ್ಯತೆ ಇದೆ. ಹಾಗಾಗಿ ಸಣ್ಣ ಮನೆಯಲ್ಲಿ ಕೂರುತ್ತಾರೆ, ಮಲಗುತ್ತಾಳೆ, ಏಳುತ್ತಾರೆ ಮತ್ತೆ ತಿನ್ನುತ್ತಾರೆ.
ಹಾಸಿಗೆ ಬಿಟ್ಟು ಇಳಿಯುವಂತಿಲ್ಲ: ಮಕ್ಕಳಿಗೆ ತೂಕ ಹೆಚ್ಚಳ ಮಾಡಿಕೊಳ್ಳಲು ಪೋಷಕರು ಪ್ರೋತ್ಸಾಹಿಸ್ತಾರೆ, ಟಾಯ್ಲೆಟ್ ಹಾಗೂ ತಿನ್ನಲು ಬಿಟ್ಟು ಇನ್ಯಾವ ಕಾರಣಕ್ಕೂ ಹಾಸಿಗೆ ಬಿಟ್ಟು ಇಳಿಯುವಂತಿಲ್ಲ ಎಂದು ಷರತ್ತು ಹಾಕ್ತಾರೆ. ಇನ್ನು ಈ ಹಳ್ಳಿಯಲ್ಲಿ ಯಾರು ಅತಿ ಹೆಚ್ಚು ತೂಕ ಇರುತ್ತಾರೆಯೋ ಆ ಮಹಿಳೆಯೇ ಊರಿನ ಮುಖ್ಯಸ್ಥೆ, ಆಕೆಯ ತೂಕವನ್ನು ಬೀಟ್ ಮಾಡಿ ಕ್ವೀನ್ ಜಾಗವನ್ನು ಬೇರೆ ಮಹಿಳೆ ಅಲಂಕರಿಸಬಹುದು. ಹೀಗಾಗಿ ತೂಕ ಹೆಚ್ಚಾಗಲು ಬೇಕಾದ ಎಲ್ಲ ಕೆಲಸವನ್ನು ಮುಖ್ಯಸ್ಥೆ ಮಾಡ್ತಾರೆ.
ಫ್ಯಾಟ್ ಐಡಿಯಲ್ ವುಮೆನ್: ಈ ಮಹಿಳೆಯರನ್ನು ವರಿಸಿದ ಗಂಡಸರು ಅವರಿಗೆ ಅಡುಗೆ ಮಾಡುವುದು, ಸ್ನಾನ ಮಾಡಿಸುವುಸು, ಮೇಕಪ್ ಮಾಡುತ್ತಾರೆ. ಸಣ್ಣಗೂ ಇದ್ದು ಮದುವೆಯ ವಯಸ್ಸಿಗೆ ಬಂದ ಮಹಿಳೆಯರನ್ನು ಯಾರೂ ವರಿಸುವುದಿಲ್ಲ, ಗರ್ಲ್‌ಫ್ರೆಂಡ್ ಕೂಡ ಮಾಡಿಕೊಳ್ಳೋದಿಲ್ಲ. ಇಲ್ಲಿ ಎಲ್ಲರಿಗೂ ಫ್ಯಾಟ್ ಐಡಿಯಲ್ ವುಮೆನ್ ಆಗಿದ್ದಾರೆ!
ಈ ರೀತಿ ನಿಜಕ್ಕೂ ಇರುತ್ತದಾ ಎನಿಸಬಹುದಲ್ವಾ? ಫ್ಯಾಟ್ ಈಸ್ ಬ್ಯೂಟಿಫುಲ್ ಆದರೆ ಅನಾರೋಗ್ಯ ಅಲ್ಲ! ಇಲ್ಲಿರುವ ಸಾಕಷ್ಟು ಮಹಿಳೆಯರಿಗೆ ವಾಶ್‌ರೂಮ್‌ಗೆ ತೆರಳಲು ಇನ್ನೊಬ್ಬರ ಸಹಾಯ ಬೇಕಿದೆ.. ಏನೇ ಆಗಲಿ ನಾನು ದಪ್ಪ ಇದ್ದೇನೆ, ದಪ್ಪ ಇದ್ದವರು ಸುಂದರ ಅಲ್ಲ ಅನ್ನೋ ಮನಸ್ಥಿತಿಯ ಹೆಣ್ಣುಮಕ್ಕಳು ಇದನ್ನು ಖಂಡಿತಾ ಓದಿ.. ಬಾಹ್ಯ ಸೌಂದರ್ಯ ಮುಖ್ಯ ಆದರೆ ಆಂತರಿಕ ಸೌಂದರ್ಯದಷ್ಟಲ್ಲ. ನಿಮ್ಮ ದೇಹವನ್ನು ಪ್ರೀತಿಸಿ, ಗೌರವಿಸಿ, ಆದಷ್ಟು ಆರೋಗ್ಯಕರವಾಗಿರಿ..