ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನಾಳೆ ಬೆಂಗಳೂರು ಬಂದ್‌ಗೆ ಕರೆ ನೀಡಿದೆ. ಒಟ್ಟಾರೆ 150 ಕ್ಕೂ ಹೆಚ್ಚು ಸಂಘಟನೆಗಳು ಬೆಂಗಳೂರು ಬಂದ್‌ಗೆ ಬೆಂಬಲ ಘೋಷಿಸಿದ್ದು, ನಾಳೆ ಬೆಂಗಳೂರು ಸ್ತಬ್ಧವಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಬಂದ್ ನಡೆಯಲಿದೆ.11 ಗಂಟೆಯಿಂದ ಬೆಂಗಳೂರಿನ ಪುರಭವನದಿಂದ ಪ್ರತಿಭಟನಾ ರ‍್ಯಾಲಿ ಆರಂಭವಾಗಲಿದೆ.
ಬಿಎಂಟಿಸಿ ಬಸ್‌ಗಳನ್ನು ರಸ್ತೆಗಿಳಿಸದಂತೆ ಕೆಎಸ್‌ಆರ್‌ಟಿಸಿ ಸ್ಟಾಫ್ ಆಂಡ್ ವರ್ಕರ‍್ಸ್ ಫೆಡರೇಷನ್ ಕರೆ ನೀಡಿದ್ದು, ಬಸ್‌ಗಳು ಅತಿ ವಿರಳವಾಗಿ ಇರಲಿದೆ. ಮೆಟ್ರೋ, ಆಸ್ಪತ್ರೆ, ಔಷಧ, ಆಂಬುಲೆನ್ಸ್, ಹಾಲು ತರಕಾರಿ ಮಾರಾಟ ಲಭ್ಯವಿರಲಿದೆ. ಇನ್ನು ಊಬರ್, ಓಲಾ, ಆಟೋ, ಖಾಸಗಿ ಸಾರಿಗೆ, ಥಿಯೇಟರ್ ಲಭ್ಯವಿರುವುದಿಲ್ಲ.