ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅಧ್ಯಕ್ಷತೆಯಲ್ಲಿ ಮೊದಲನೇ ತ್ರೈಮಾಸಿಕ ಕೆಡಿಪಿ ಸಭೆ ಮಾಡಲಾಗಿದ್ದು, ಈ ವೇಳೆ ಸಭೆಗೆ ಗೈರಾಗಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಯನ್ನು ಸಸ್ಪೆಂಡ್ ಮಾಡುವಂತೆ ಸೂಚನೆ ನೀಡಿದ್ದಾರೆ.
ಜನತಾ ದರ್ಶನ ಸಿದ್ಧತೆಗೆ ಹೋಗಿದ್ದಾರೆಂದು ಅಧಿಕಾರಿಗಳಿಂದ ಸಬೂಬು ನೀಡಿದ್ದು, ಹಾಗಿದ್ದರೆ ಇದ್ಯಾವ ಸಭೆ ಎಂದು ಅಧಿಕಾರಿಗಳನ್ನು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಡಿ.ಕೆ.ಶಿವಕುಮಾರ್, 7-8 ಅಧಿಕಾರಿಗಳು ಬಿಟ್ಟು ಬೇರೆ ಯಾರ ಮುಖವೂ ನಾನು ನೋಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರನ್ನು ಬಂದು ಭೇಟಿ ಮಾಡುವ ಸೌಜನ್ಯವಿಲ್ಲ. ನಿಮ್ಮ ಇಲಾಖೆಯಲ್ಲಾದ ಕೆಲಸದ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಬನ್ನೇರುಘಟ್ಟದಲ್ಲಿ ಪ್ರಾಣಿಗಳು ಮೃತಪಟ್ಟಿವೆ, ಯಾರೂ ವರದಿ ಕೊಡಲಿಲ್ಲ. ಜಿಲ್ಲಾ ಪಂಚಾಯತ್ ಹೇಗೆ ಕೆಲಸ ಮಾಡುತ್ತೆ ಅಂತ ನನಗೆ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.
ನಿಮ್ಮ ಬಳಿ ಬರುವ ಸಾರ್ವಜನಿಕರನ್ನು ಕೇವಲ ಹಣದಿಂದ ಅಳೆಯಬೇಡಿ. ಭ್ರಷ್ಟಾಚಾರ ಬಿಟ್ಟು ಪಾರದರ್ಶಕ ಆಡಳಿತ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಬೇಕು. ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡುವಂತೆ ಸೂಚನೆ ನೀಡಿದ್ದಾರೆ.