ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನಗರದಲ್ಲಿ ಕಾವೇರಿ ಹೋರಾಟ ಜೋರಾಗಿದ್ದು, ತಮಿಳುನಾಡು ಸಿಎಂ ಸ್ಟಾಲಿನ್ ಅಣಕು ತಿಥಿ ಮಾಡಿ ಆಕ್ರೋಶ ಹೊರಹಾಕಿರುವ ದೃಶ್ಯ ಕಂಡುಬಂತು.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನುವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕರ್ನಾಟಕದ ರಾಮನಗರದಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಪ್ರತಿಭಟನಾಕಾರರು ಸ್ಟಾಲಿನ್ ಭಾವಚಿತ್ರಕ್ಕೆ ಹೂವಿನ ಹಾಕಿ, ಮುಂದೆ ತಿಂಡಿ ತಿನಿಸು, ತೆಂಗಿನ ಕಾಯಿ ಹೊಡೆದು ಅಣಕು ತಿಥಿ ನಡೆಸಿದರು.
ನಂತರ ಬಾಯಿ ಬಡಿದುಕೊಂಡು, ಕೆಲಕಾಲ ಮೌನಾಚರಣೆ ಸಲ್ಲಿಸಿದರು. ಮತ್ತೆ ಹುಟ್ಟಿ ಬರಬೇಡಿ ಎಂಬ ಘೋಷಣೆಗಳೊಂದಿಗೆ ತಮಿಳುನಾಡು ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
#WATCH | Karnataka Rakshana Vedike stage protest over the Cauvery water release to Tamil Nadu, in Karnataka's Ramanagara. pic.twitter.com/BQxGGxUVJE
— ANI (@ANI) September 26, 2023