ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನೀರಿಗಾಗಿ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಸಿನಿ ರಂಗ ಕೂಡ ತಮ್ಮ ಬೆಂಬಲ ಸೂಚಿಸಿದೆ. ಬೆಂಗಳೂರು ಬಂದ್ ಬೆಂಬಲಿಸಿ ಇಂದು ನಡೆಯಬೇಕಿದ್ದ ಎಲ್ಲಾ ಸಿನಿಮಾ ಶೂಟಿಂಗ್‌ಘಳನ್ನು ಸ್ಥಗಿತಗೊಳಿಸಲಾಗಿದೆ. ಶೂಟಿಂಗ್ ಮಾತ್ರವಲ್ಲದೆ ನಗರದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವನ್ನು ಕೂಡ ನಿಲ್ಲಿಸಲಾಗಿದೆ.
ಸಿನಿಮಾ ಅಷ್ಟೇ ಅಲ್ಲದೆ, ಟೆಲಿವಿಷನ್ ಅಸೋಸಿಯೇಷನ್ ಸಹ ಬಂದ್‌ಗೆ ಸಹಮತ ಸೂಚಿಸಿದ್ದು, ಸೀರಿಯಲ್ ಹಾಗೂ ರಿಯಾಲಿಟಿ ಶೋ ಚಿತ್ರೀಕರಣಗಳನ್ನು ನಿಲ್ಲಿಸಿದ್ದಾರೆ. ನಗರದ ಚಿತ್ರಮಂದಿರಗಳಲ್ಲಿ ಇಂದು ಯಾವುದೇ ಸಿನಿಮಾ ಪ್ರದರ್ಶನವಾಗುವುದಿಲ್ಲ.