ಮಧುಮೇಹವನ್ನು ನಿಯಂತ್ರಿಸುವುದು ಕೇವಲ ಔಷಧಿಗಳಲ್ಲೇ ಸೀಮಿತವಲ್ಲ. ನೀವು ಏನು ತಿನ್ನುತ್ತೀರಿ ಎಂಬುದಷ್ಟೇ ಅಲ್ಲ, ಯಾವ ಸಮಯದಲ್ಲಿ ತಿನ್ನುತ್ತೀರಿ ಎಂಬುದೂ ಅಷ್ಟೇ ಮುಖ್ಯ. ವಿಶೇಷವಾಗಿ ರಾತ್ರಿಯ ಊಟ ಮಧುಮೇಹಿಗಳ ರಕ್ತದ ಸಕ್ಕರೆ ಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ. ಕೆಲವು ಆಹಾರಗಳನ್ನು ರಾತ್ರಿ ಸೇವಿಸಿದರೆ ಇನ್ಸುಲಿನ್ ಏಕಾಏಕಿ ಹೆಚ್ಚಾಗಿ, ಸಕ್ಕರೆ ಮಟ್ಟ ಹದಗೆಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ರಾತ್ರಿ ಯಾವ ಆಹಾರಗಳನ್ನು ತಪ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ.
ರಾತ್ರಿ ತಪ್ಪಿಸಬೇಕಾದ ಆಹಾರಗಳು
- ಬಿಳಿ ಅಕ್ಕಿ ಮತ್ತು ಸಂಸ್ಕರಿತ ಹಿಟ್ಟು: ರೊಟ್ಟಿ, ನಾನ್, ಬಿಳಿ ಅನ್ನ, ಪಾಸ್ತಾ ಮೊದಲಾದವುಗಳು ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದ್ದು, ರಕ್ತದ ಸಕ್ಕರೆಯನ್ನು ತ್ವರಿತವಾಗಿ ಹೆಚ್ಚಿಸುತ್ತವೆ.
- ಆಲೂಗಡ್ಡೆ ಮತ್ತು ಕರಿದ ಆಹಾರಗಳು: ಫ್ರೈಸ್, ಕರಿದ ತಿಂಡಿಗಳು ದೇಹದಲ್ಲಿ ಬೇಗನೆ ಗ್ಲೂಕೋಸ್ ಆಗಿ ಮಾರ್ಪಡುತ್ತವೆ.
- ಸಿಹಿ ಸಾಸ್ ಮತ್ತು ಗ್ರೇವಿಗಳು: ಕೆಚಪ್, ಸಿಹಿ ಸಾಸ್, ಚಿಲ್ಲಿ ಸಾಸ್, ರೆಸ್ಟೋರೆಂಟ್ ಗ್ರೇವಿಗಳಲ್ಲಿ ಅಡಗಿರುವ ಸಕ್ಕರೆ ಅಪಾಯಕಾರಿಯಾಗುತ್ತವೆ.
- ಬಿಳಿ ಬ್ರೆಡ್ ಮತ್ತು ಬೇಕರಿ ಪದಾರ್ಥಗಳು: ಫೈಬರ್ ಕೊರತೆಯಿಂದ ಸಕ್ಕರೆ ಸ್ಪೈಕ್ ಉಂಟಾಗುತ್ತದೆ.
- ಸಿಹಿತಿಂಡಿಗಳು ಮತ್ತು ತಂಪು ಪಾನೀಯಗಳು: ತಡರಾತ್ರಿ ಸಕ್ಕರೆ ಸೇವನೆ ಮರುದಿನ ಬೆಳಗಿನ ಸಕ್ಕರೆ ಮಟ್ಟ ಹೆಚ್ಚಿಸಬಹುದು.
- ಪ್ಯಾಕ್ ಮಾಡಿದ ಆಹಾರಗಳು: ಸಂರಕ್ಷಕಗಳು ಮತ್ತು BPA ಇನ್ಸುಲಿನ್ ಸಂವೇದನೆಗೆ ಹಾನಿ ಮಾಡಬಹುದು.
ರಾತ್ರಿ ಏನು ತಿನ್ನುವುದು ಉತ್ತಮ?:
ತರಕಾರಿಗಳು, ಬೇಳೆ, ಮೊಸರು, ಚೀಸ್, ಮೊಟ್ಟೆ, ಬೇಯಿಸಿದ ಮೀನು, ಕಡಿಮೆ ಗ್ಲೈಸೆಮಿಕ್ ಆಹಾರಗಳು ಉತ್ತಮ. ಮಲಗುವ 2–3 ಗಂಟೆಗಳ ಮೊದಲು ಹಗುರವಾದ ಊಟ ಮಾಡಿ ಮುಗಿಸುವುದು ಸೂಕ್ತ. ಯಾವುದೇ ಆಹಾರ ಬದಲಾವಣೆ ಮಾಡುವ ಮೊದಲು ವೈದ್ಯರ ಸಲಹೆ ಅಗತ್ಯ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

