Wednesday, December 24, 2025

ದರ್ಶನ್–ಸುದೀಪ್ ಸ್ಟಾರ್ ವಾರ್ ಗೆ ತುಪ್ಪ ಸುರಿಯುತ್ತಿದ್ದಾರಾ ಫ್ಯಾನ್ಸ್? ಧನ್ವೀರ್​ಗೆ ಟಾಂಗ್ ಕೊಟ್ಟ ವಿನಯ್ ಗೌಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳ ನಡುವಿನ ವೈಮನಸ್ಸು ಹೊಸದೇನಲ್ಲ. ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಈ ಫ್ಯಾನ್ಸ್ ವಾರ್, ಇತ್ತೀಚೆಗೆ ಮತ್ತೊಮ್ಮೆ ತೀವ್ರಗೊಂಡಿದೆ. ಸಾಮಾನ್ಯವಾಗಿ ಈ ರೀತಿಯ ವಿವಾದಗಳಿಂದ ದೂರವೇ ಇರುತ್ತಿದ್ದ ಸುದೀಪ್, ತಮ್ಮ ಸಿನಿಮಾಗೆ ಸಂಬಂಧಿಸಿದ ಬೆದರಿಕೆಗಳ ಹಿನ್ನೆಲೆಯಲ್ಲಿ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದರು. ಅದೇ ಹೇಳಿಕೆ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಈ ಬೆಳವಣಿಗೆಯ ನಡುವೆಯೇ ದರ್ಶನ್ ಆಪ್ತ ನಟ ಧನ್ವೀರ್ ಗೌಡ, “ಕಾಡಿನಲ್ಲಿ ಅನೇಕ ಪ್ರಾಣಿಗಳಿದ್ದರೂ ಸಿಂಹ ಮಾತ್ರವೇ ಕಾಡಿನ ರಾಜ” ಎಂದು ಪೋಸ್ಟ್ ಹಂಚಿಕೊಂಡಿದ್ದರು. ಈ ಸಂದೇಶ ಸುದೀಪ್‌ ವಿರುದ್ಧವೇ ಎನ್ನುವ ಅಭಿಪ್ರಾಯಗಳು ತಕ್ಷಣವೇ ವ್ಯಕ್ತವಾಗಿದ್ದವು. ಇದಕ್ಕೆ ಪ್ರತಿಯಾಗಿ ಸುದೀಪ್ ಆಪ್ತ ವಿನಯ್ ಗೌಡ, “ಸಿಂಹ ಕಾಡಿನ ರಾಜ ಎನ್ನುವುದು ಸರಿ, ಆದರೆ ಆ ಸಿಂಹ ಸುದೀಪ್” ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಧನ್ವೀರ್ ಪೋಸ್ಟ್‌ಗೆ ನೇರ ಉತ್ತರ ನೀಡಿದ್ದಾರೆ.

ವಿನಯ್ ಗೌಡ ಈ ಹಿಂದೆ ದರ್ಶನ್ ಅಭಿನಯದ ‘ಡೆವಿಲ್’ ಚಿತ್ರದಲ್ಲಿ ನಟಿಸಿದ್ದರೂ, ಚಿತ್ರದ ಪ್ರಚಾರದಲ್ಲಿ ಭಾಗವಹಿಸಿರಲಿಲ್ಲ. ಆ ವೇಳೆ ಚಿತ್ರತಂಡದೊಂದಿಗೆ ಮನಸ್ತಾಪವಿತ್ತು ಎಂಬ ಮಾತುಗಳು ಹರಡಿದ್ದವು. ನಂತರ ವಿನಯ್, ತಾವು ಪೇಯ್ಡ್ ಆಕ್ಟರ್ ಸಂಭಾವನೆ ಕೊಟ್ಟರು ನಟಿಸಿದ್ದೀನಿ. ಬುಕ್​​ ಮೈ ಶೋನಲ್ಲಿ ‘ಡೆವಿಲ್’ ಸಿನಿಮಾದಲ್ಲಿ ನಟಿಸಿರುವ ಎಲ್ಲರ ಹೆಸರಿದೆ, ಆದರೆ ನನ್ನ ಹೆಸರಿಲ್ಲ. ಇನ್ನು ದರ್ಶನ್ ಅವರ ಬಗ್ಗೆ ನಾನು ಮಾತನಾಡಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಮಾತನಾಡಬಾರದು ಎಂದೇ ನಾನು ಮಾತನಾಡಿಲ್ಲ. ನಾನು ಮಾತನಾಡಿ ಅವರಿಗೆ ಕಾನೂನಾತ್ಮಕವಾಗಿ ಏನಾದರೂ ಸಮಸ್ಯೆ ಆಗುವುದು ಸರಿಯಲ್ಲ ಎಂದು ಹೇಳಿಕೊಂಡಿದ್ದಾರೆ.

ಬಿಗ್‌ಬಾಸ್ ಮೂಲಕ ಸುದೀಪ್ ಅವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿರುವ ವಿನಯ್, ಇತ್ತೀಚಿನ ಬೆಳವಣಿಗೆಯಲ್ಲಿ ಸುದೀಪ್ ಪರ ನಿಂತಿದ್ದು, ಅಭಿಮಾನಿಗಳ ನಡುವಿನ ವಾಗ್ವಾದ ಮತ್ತಷ್ಟು ಉಗ್ರಗೊಳ್ಳುವಂತೆ ಮಾಡಿದೆ.

error: Content is protected !!