ನನ್ನ ಬಯೋಪಿಕ್‌ಗೆ ರಿಷಬ್ ಶೆಟ್ಟಿ ನಿರ್ದೇಶನ: ಹೀಗೊಂದು ಅಸೆ ಬಿಚ್ಚಿಟ್ಟ ರಾಖಿ ಸಾವಂತ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ನಟಿ ರಾಖಿ ಸಾವಂತ್(Rakhi Sawant) ಸಿನಿಮಾ ವಿಚಾರದಿಂದ ಹೆಚ್ಚಾಗಿ ವೈಯಕ್ತಿಕ ವಿಚಾರಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ.

ಮಾಜಿ ಪತಿ ಆದಿಲ್ ಖಾನ್ ದುರಾನಿ (Adil Khan Durrani ) ಕುರಿತ ವಿಚಾರಗಳಿಗೆ ಸೌಂಡ್‌ ಮಾಡುತ್ತಲೇ ಇರುತ್ತಾರೆ. ಆದರೀಗ ನಟಿ ತಮ್ಮ ಬಯೋಪಿಕ್‌ ಬಗ್ಗೆ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ತನ್ನ ಜೀವನ ಚರಿತ್ರೆಯನ್ನು ಕಾಂತಾರ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ನಿರ್ದೇಶನ ಮಾಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ರಾಖಿ ಸಾವಂತ್​ ಅವರ ಮಾಜಿ ಪತಿ ಆದಿಲ್​ ಖಾನ್​ ಮನೆ ಮುಂದೆ ಬುಲ್ಡೋಜರ್​ ತಂದು ಹೈಡ್ರಾಮಾ ಮಾಡಿದ್ದರು.

ಇದೀಗ ರಾಖಿ ಸಾವಂತ್‌ ಜೀವನ ಕಥೆ ಸಿನಿಮಾವಾಗುತ್ತಿದೆಯಂತೆ. ತಮ್ಮ ಪಾತ್ರವನ್ನು ವಿದ್ಯಾ ಬಾಲನ್​ ಮಾಡಿದರೆ ಉತ್ತಮ ಎಂದು ರಾಖಿ ಸಾವಂತ್ ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ನಿರ್ದೇಶನ ಮಾಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ನನಗೆ ಕಾಂತಾರ ಚಿತ್ರದ ನಿರ್ದೇಶಕ ರಿಷಬ್​ ಶೆಟ್ಟಿ ಹೆಚ್ಚು ಇಷ್ಟ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!