ಆಪರೇಷನ್ ಹಸ್ತಕ್ಕೆ ನಾವು ಹೆದರುವ ಮಾತೇ ಇಲ್ಲ- ಹೆಚ್.ಡಿ.ರೇವಣ್ಣ

ಹೊಸದಿಗಂತ ವರದಿ ಕಲಬುರಗಿ:

1991ರಿಂದ ನಾನು ರಾಜಕೀಯವನ್ನು ನೋಡುತ್ತಿದ್ದೇನೆ. ಹೀಗಾಗಿ ಆಪರೇಷನ್ ಹಸ್ತಕ್ಕೆ ನಾವು ಹೆದರುವುದಿಲ್ಲ ಎಂದು ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

ಗುರುವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿಗೆ ಕೌಂಟರ್ ಅಟ್ಯಾಕ್ ಮಾಡಲು ಡಿ.ಕೆ.ಶಿವಕುಮಾರ್‌ ಆಪರೇಷನ್ ಹಸ್ತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ಕಾಂಗ್ರೆಸ್ ಪಕ್ಷದವರು ಕೋಮುವಾದಿಗಳನ್ನು ದೂರವಿಡಬೇಕು ಎಂದು ಹೇಳ್ತಾರೆ. ಆದರೆ, ನಮ್ಮನ್ನು ಹಿಂದೆ ಯಾವ ರೀತಿ ನಡೆಸಿಕೊಂಡಿದ್ದಾರೆ ಎಂದು ನಮಗೆ ಗೊತ್ತಿದೆ. ಬಿಜೆಪಿ ಮತ್ತು ನಾವು ಎಲ್ಲಾ ಒಟ್ಟಿಗೆ ಕೂತುಕೊಂಡೆ ಮೈತ್ರಿ ಮಾಡಿಕೊಂಡಿದ್ದು, ನಮ್ಮ ಪಕ್ಷದ ಸಿದ್ಧಾಂತ ಬಿಟ್ಟು ಮೈತ್ರಿ ಮಾಡಿಕೊಂಡಿಲ್ಲ ಎಂದರು.

ತಮಿಳುನಾಡಿಗೆ ಕರ್ನಾಟಕವನ್ನು ಅಡವಿಟ್ಟಿದ್ದಾರೆ

ಕಾವೇರಿ ನೀರಿಗಾಗಿ ನಾಳೆ ಕರ್ನಾಟಕ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯಗಳು `ಎಂ’ ಟೀಂ ಮತ್ತು `ಬಿ’ ಟೀಂ ಆಗಿದ್ದು, ಇಂಡಿಯಾ ಒಕ್ಕೂಟದ ಸ್ಥಾನಗಳನ್ನು ಗೆಲ್ಲಲು ರಾಜ್ಯವನ್ನು ಅಡವಿಟ್ಟಿದ್ದಾರೆ. ತಮಿಳುನಾಡಿಗೆ ಕರ್ನಾಟಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಅಡವಿಟ್ಟಿದೆ ಎಂದು ಹರಿಹಾಯ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!