ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣಿ ಕುಸಿದು ಆರು ಮಂದಿ ಸಾವನ್ನಪ್ಪಿರುವ ಘಟನೆ ಜಿಂಬಾಬ್ವೆಯ ಚೆಗುಟು ಎಂಬಲ್ಲಿ ನಡೆದಿದೆ. ಇನ್ನೂ 15 ಮಂದಿ ಗಣಿ ಅವಶೇಷಗಳಡಿ ಸಿಲುಕಿದ್ದು, ರಕ್ಷಣಾ ಕಾಋಯಾಚರಣೆ ನಡೆಯುತ್ತಿರುವುದಾಗಿ ಜಿಂಬಾಬ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ ಹರಾರೆಯಿಂದ ಪಶ್ಚಿಮಕ್ಕೆ 100 ಕಿಲೋಮೀಟರ್ ದೂರದಲ್ಲಿರುವ ಚೆಗುಟು ಎಂಬಲ್ಲಿ ಶುಕ್ರವಾರ ರಾತ್ರಿ ಬೇ ಹಾರ್ಸ್ ಗಣಿ ಕುಸಿದಿದೆ. ಗಣಿ ಕುಸಿದಾಗ 34 ಮಂದಿ ನೆಲದಡಿಯಲ್ಲಿ ಸಿಲುಕಿದ್ದು, 13 ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ ರಾತ್ರಿ ಆರು ಮೃತದೇಹಗಳನ್ನು ಗಣಿಯಿಂದ ಹೊರತೆಗೆಯಲಾಗಿದೆ. ಇನ್ನೂ 15 ಗಣಿಗಾರರು ಭೂಗತರಾಗಿದ್ದು, ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ.