Wednesday, December 24, 2025

ಮತ್ತೆ ಒಂದಾದ ಅಲ್ಲು ಅರ್ಜುನ್–ತ್ರಿವಿಕ್ರಮ್ ಜೋಡಿ: ಶುರುವಾಗ್ತಿದೆ 1000 ಕೋಟಿ ಬಜೆಟ್‌ ಸಿನಿಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಹೀರೋ–ಡೈರೆಕ್ಟರ್ ಜೋಡಿಗಳಿಗೆ ಯಾವಾಗಲೂ ವಿಶೇಷ ಕ್ರೇಜ್ ಇರುತ್ತದೆ. ಅಂಥದ್ದೇ ಯಶಸ್ವಿ ಜೋಡಿಯಾದ ಅಲ್ಲು ಅರ್ಜುನ್ ಮತ್ತು ತ್ರಿವಿಕ್ರಮ್ ಮತ್ತೆ ಒಟ್ಟಿಗೆ ಕೆಲಸ ಮಾಡುವ ಸುದ್ದಿ ಸಿನಿಪ್ರೇಮಿಗಳಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ.

‘ಜುಲೈ’, ‘ಸನ್ ಆಫ್ ಸತ್ಯಮೂರ್ತಿ’, ‘ಅಲಾ ವೈಕುಂಟಪುರಂಲೊ’ ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿರುವ ಈ ಜೋಡಿ, ಈ ಬಾರಿ ಸುಮಾರು 1000 ಕೋಟಿ ಬಜೆಟ್‌ನ ಭಾರೀ ಸಿನಿಮಾಗೆ ಕೈ ಹಾಕಲಿದೆ ಎನ್ನಲಾಗುತ್ತಿದೆ.

‘ಪುಷ್ಪ 2’ ಬಳಿಕ ಅಲ್ಲು ಅರ್ಜುನ್ ತ್ರಿವಿಕ್ರಮ್ ಚಿತ್ರದ ಭಾಗವಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ನಂತರ ಅವರು ನಿರ್ದೇಶಕ ಅಟ್ಲಿ ಸಿನಿಮಾಗೆ ಒಪ್ಪಿಕೊಂಡರು. ಇತ್ತ ತ್ರಿವಿಕ್ರಮ್ ವೆಂಕಟೇಶ್ ಜೊತೆ ಕುಟುಂಬ ಹಾಸ್ಯಚಿತ್ರದಲ್ಲಿ ಬ್ಯುಸಿಯಾಗಿದ್ದು, ಜೂ.ಎನ್‌ಟಿಆರ್ ಜೊತೆ ‘ಮುರುಗನ್’ ಸಿನಿಮಾ ಮಾಡುವ ಸುದ್ದಿ ಕೂಡ ಕೇಳಿಬಂದಿತ್ತು. ಇದೀಗ ಆ ಪೌರಾಣಿಕ ಕಥೆಯೇ ಅಲ್ಲು ಅರ್ಜುನ್‌ಗೆ ಸಿಕ್ಕಿದೆ ಎಂಬ ಚರ್ಚೆ ಜೋರಾಗಿದೆ.

ಹರಿದಾಡುತ್ತಿರುವ ಮಾಹಿತಿಯಂತೆ, ದೇವರು ಮುರುಗನ್ ಅಥವಾ ಕಾರ್ತಿಕೇಯನನ್ನು ಕೇಂದ್ರವಾಗಿಟ್ಟುಕೊಂಡ ಕಥೆಯನ್ನು ತ್ರಿವಿಕ್ರಮ್ ಅದ್ಧೂರಿಯಾಗಿ ತೆರೆಗೆ ತರುವ ಯೋಜನೆ ಹೊಂದಿದ್ದಾರೆ. ದೇವರ ರೂಪವನ್ನು ವಿಭಿನ್ನ ಶೈಲಿಯಲ್ಲಿ ತೋರಿಸಲು ಸಿದ್ಧತೆ ನಡೆಯುತ್ತಿದೆ. ವಾಣಿಜ್ಯತೆಯೊಂದಿಗೆ ತತ್ವಚಿಂತನೆ ಮಿಶ್ರಣ ಮಾಡುವ ತ್ರಿವಿಕ್ರಮ್ ಶೈಲಿ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದ ಗಮನ ಸೆಳೆಯಬಹುದೇ ಎಂಬುದು ಈಗ ಎಲ್ಲರ ಕುತೂಹಲ.

error: Content is protected !!