RECIPE| ಈ ಸೂಪ್‌ ಕುಡಿಯೋಕೆ ರೆಸ್ಟೋರೆಂಟ್‌ಗೆ ಹೋಗಬೇಕಿಲ್ಲ, ಮನೆಯಲ್ಲೂ ಮಾಡಬಹುದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹೊಟೇಲ್ ರುಚಿಯಲ್ಲೇ ಮನೆಯಲ್ಲೇ ನೀವು ಟೊಮೆಟೋ ಸೂಪ್ ತಯಾರಿಸಬಹುದು. ಶುಚಿ ರುಚಿಯಾದ ಟೇಸ್ಟಿ ಸೂಪ್ ಹೀಗೆ ಮಾಡಿ.

ಬೇಕಾಗುವ ಸಾಮಾಗ್ರಿ:

ಟೊಮೆಟೋ 1ಕೆಜಿ, ನೀರುಳ್ಳಿ 2, ಬೆಳ್ಳುಳ್ಳಿ 1ಗಡ್ಡೆ, ಬೆಣ್ಣೆ ಸ್ವಲ್ಪ, ಕರಿಮೆಣಸಿನ ಹುಡಿ ಸ್ವಲ್ಪ, ಸಕ್ಕರೆ ಒಂದು ಟೀ ಸ್ಪೂನ್, ನೀರು 3 ಕಪ್, ಉಪ್ಪು ರುಚಿಗೆ ಬೇಕಾದಷ್ಟು.

ಮಾಡುವ ವಿಧಾನ:

ಟೊಮೆಟೋವನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಯಲು ಇಡಿ. ಸಿಪ್ಪೆ ಬಿಡುತ್ತಿದ್ದಂತೆಯೇ ಕೆಳಗಿಳಿಸಿ, ಟೊಮೆಟೋ ಸಿಪ್ಪೆ ಸುಲಿದು ಮಿಕ್ಸಿಗೆ ಹಾಕಿ ನುಣ್ಣಗೆ ಅರೆಯಿರಿ. ನೀರುಳ್ಳಿ ಸಿಪ್ಪೆ ಸುಲಿದು ಸಣ್ಣಗೆ ಹೆಚ್ಚಿ ಬಾಣಲೆಯಲ್ಲಿ ಸ್ವಲ್ಪ ಬೆಣ್ಣೆ ಸೇರಿಸಿ ಫ್ರೈಮಾಡಿ. ಹೊಂಬಣ್ಣಕ್ಕೆ ಬರುತ್ತಿದ್ದಂತೆಯೇ ಬಾಣಲೆಯಿಂದ ಬೌಲ್ ಗೆ ವರ್ಗಾಯಿಸಿ. ಈಗ ಬೆಳ್ಳಿಳ್ಳಿ ಹಾಗೂ ಬೌಲ್‍ನಲ್ಲಿದ್ದ ನೀರುಳ್ಳಿಯ ಅರ್ಧಭಾಗವನ್ನು ಮಿಕ್ಸಿಯಲ್ಲಿರುವ ಟೊಮೆಟೊ ಜೊತೆಗೆ ಸೇರಿಸಿ ಸರಿಯಾಗಿ ಅರೆಯಿರಿ. ಮಿಶ್ರಣವನ್ನು ಬಾಣಲೆಗೆ ವರ್ಗಾಯಿಸಿ ಸ್ವಲ್ಪ ಉಪ್ಪು, ಸಕ್ಕರೆ ಸೇರಿಸಿ ಸರಿಯಾಗಿ ಕುದಿಸಿ. ಬಿಸಿ ಬಿಸಿ ಸೂಪ್ ಅನ್ನು ಸರ್ವ್ ಬೌಲ್‍ಗೆ ಹಾಕಿ ಈರುಳ್ಳಿ ತುರಿಯನ್ನು ಅಲಂಕರಿಸಿ. ಸ್ವಲ್ಪ ಕರಿಮೆಣಸಿನ ಪುಡಿ ಉದುರಿಸಿ ಸರ್ವ್ ಮಾಡಿ. ರುಚಿ ರುಚಿಯಾದ ಟೊಮೆಟೊ ಸೂಪ್ ಸಖತ್ ಟೇಸ್ಟಿ ಆಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!