Wednesday, December 24, 2025

ʼಅಭಿಮಾನದ ಹೆಸರಲ್ಲಿ ಕಿರುಕುಳ ಸಹಿಸೋದಿಲ್ಲ, ಪ್ರತೀ ಮಹಿಳೆಯೂ ಗೌರವಕ್ಕೆ ಅರ್ಹಳುʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸೋಶಿಯಲ್‌ ಮೀಡಿಯಾದಲ್ಲಿ ತನ್ನ ಬಗ್ಗೆ ಕೆಟ್ಟ ಕಮೆಂಟ್ಸ್‌ ಮಾಡಿದವರ ವಿರುದ್ಧ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ದೂರು ನೀಡಿದ್ದಾರೆ. ಅಭಿಮಾನದ ಹೆಸರಿನಲ್ಲಿ ಕಿರುಕುಳ ನೀಡೋಕೆ ಅವಕಾಶ ನೀಡೋದಿಲ್ಲ. ದೂರು ಕೊಟ್ಟಿದ್ದೇನೆ ಎಂದು ವಿಜಯಲಕ್ಷ್ಮಿ ಪೋಸ್ಟ್‌ ಮಾಡಿದ್ದಾರೆ.

ಅಲ್ಲದೇ ಕೆಟ್ಟದಾಗಿ ಕಾಮೆಂಟ್ಸ್ ಮಾಡಿದ ಖಾತೆಗಳ ಸ್ಕ್ರೀನ್‌ಶಾಟ್‌ಗಳನ್ನು ಸಹ ವಿಜಯಲಕ್ಷ್ಮಿ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಕ್ಲಾಸ್ ಫ್ಯಾನ್ಸ್ ಎಂದು ಕರೆಯಲ್ಪಡುವ ಎಲ್ಲರಿಗೂ ನಿಮ್ಮ ಮಟ್ಟವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಕ್ಕಾಗಿ ಧನ್ಯವಾದಗಳು. ಈ ಖಾತೆಗಳ ವಿರುದ್ಧ ಪೊಲೀಸ್ ದೂರುಗಳನ್ನು ದಾಖಲಿಸಲಾಗಿದೆ. ಅಭಿಮಾನದ ಹೆಸರಲ್ಲಿ ಇನ್ನುಮುಂದೆ ಕಿರುಕುಳ ನಡೆಯುವುದಿಲ್ಲ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ನಾನು ಮೌನವಾಗಿದ್ದುಕೊಂಡು ಈ ಕೆಟ್ಟ ಕಮೆಂಟ್‌ಗಳನ್ನು ಅನುಮತಿಸುವುದಿಲ್ಲ. ಇದು ನಿಮ್ಮ ನಿತ್ಯದ ಕಾಯಕ ಆಗಿರಬಹುದು, ಇಂದು ಮತ್ತು ಮುಂದಿನ ದಿನಗಳಲ್ಲಿ ದೇವರು ನಿಮ್ಮನ್ನು ಆಶೀರ್ವದಿಸಲಿ. ಇದು ಕೇವಲ ನನ್ನ ಬಗ್ಗೆ ಅಲ್ಲ. ಪ್ರತಿಯೊಬ್ಬ ಮಹಿಳೆಯೂ ಗೌರವಕ್ಕೆ ಅರ್ಹಳು ಎಂದು ಇದು ನಿಮಗೆ ನೆನಪಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.

error: Content is protected !!