Wednesday, December 24, 2025

ಬೆಂಗಳೂರಿಂದ ಪೋಸ್ಟಲ್‌ ಮೂಲಕ ಅಯೋಧ್ಯೆಗೆ ಹೊರಟ ಚಿನ್ನದ ಶ್ರೀರಾಮ ಮೂರ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಿಂದ ಅಯೋಧ್ಯೆಗೆ ಪೋಸ್ಟಲ್‌ ಮೂಲಕ ಚಿನ್ನದ ರಾಮನ ಮೂರ್ತಿಯನ್ನು ರವಾನಿಸಲಾಗಿದೆ. ಅಂಚೆ ಇಲಾಖೆಯು ತನ್ನ ಲಾಜಿಸ್ಟಿಕ್‌ ಪೋಸ್ಟ್‌ ಸೇವೆಯನ್ನು ಬಳಸಿಕೊಂಡು ತಂಜಾವೂರಿನ ಚಿನ್ನದ ವಿಗ್ರಹವನ್ನು ಯಶಸ್ವಿಯಾಗಿ ರವಾನಿಸಿದೆ.

ಶ್ರೀರಾಮನ ಮೂರ್ತಿಯನ್ನು ಸಾಂಪ್ರದಾಯಿಕ ತಂಜಾವೂರು ಕಲಾ ಶೈಲಿಯಲ್ಲಿ ರೂಪಿಸಲಾಗಿದೆ. ಚಿನ್ನದ ಮೂರ್ತಿಯು ಕಲಾತ್ಮಕ ಮತ್ತು ಪಾರಂಪರಿಕ ಮೌಲ್ಯದ ಸಾಂಸ್ಕೃತಿಕ ಕಲಾಕೃತಿಯಾಗಿದೆ. ಈ ಪವಿತ್ರ ಕಲಾಕೃತಿಯನ್ನು ಬೆಂಗಳೂರಿನ ಜಯಶ್ರೀ ಫಣೀಶ್ ಅವರು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ದಾನ ಮಾಡಿದ್ದಾರೆ.

12 ಅಡಿ x 8 ಅಡಿ ಅಳತೆ ಮತ್ತು ಸುಮಾರು 800 ಕೆಜಿ ತೂಕದ ಈ ಮೂರ್ತಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾದ ಮರದ ಕ್ರೇಟ್‌ನಲ್ಲಿ ಪ್ಯಾಕ್ ಮಾಡಲಾಗಿತ್ತು. ಈ ಪ್ರತಿಮೆಯ ಬೆಲೆ 2.5 ಕೋಟಿ ರೂ. ಇದನ್ನು ನಿರಂತರ ಮೇಲ್ವಿಚಾರಣೆ ಮೂಲಕ ಅಯೋಧ್ಯೆಗೆ ಸಾಗಿಸಲಾಯಿತು. ಇಲಾಖಾ ಅಧಿಕಾರಿಗಳು ಪ್ರಯಾಣದುದ್ದಕ್ಕೂ ವಾಹನವನ್ನು ಬೆಂಗಾವಲು ಮಾಡಿದರು.

error: Content is protected !!