ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ ಜೋರಾಗಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಿಸಲು ಜನರು ಸಜ್ಜಾಗಿದ್ದಾರೆ. ಈ ಮಧ್ಯೆ ಕ್ರಿಸ್ಮಸ್ ಸಂಭ್ರಮಕ್ಕೆ ಶಾಕ್ ಕೊಡಲು ಆನ್ಲೈನ್ ಡೆಲಿವರಿ ಬಾಯ್ಸ್ ಮುಂದಾಗಿದ್ದಾರೆ.
ನಾಳೆ ಪ್ರಮುಖ ಇ-ಕಾಮರ್ಸ್ , ಆಹಾರ ವಿತರಣೆ ಮತ್ತು ಗೃಹ ಸೇವೆಯಿಂದ ಡೆಲಿವರಿ ಬಾಯ್ಸ್ ದೂರ ಉಳಿಯಲಿದ್ದಾರೆ. ಸ್ವಿಗ್ಗಿ , ಜೊಮ್ಯಾಟೋ , ಬ್ಲಿಂಕಿಟ್ ಮತ್ತು ಅಮೆಜಾನ್ ಸೇರಿದಂತೆ ಯಾವುದೇ ಆನ್ಲೈನ್ ಸೇವೆ ನೀಡಬಾರದೆಂದು ನಿರ್ಧರಿಸಿದ್ದಾರೆ.
ಕಾರ್ಮಿಕರಿಗೆ ನ್ಯಾಯಯುತ ವೇತನ, ಸುರಕ್ಷತೆ, ಘನತೆ ಮತ್ತು ಸಾಮಾಜಿಕ ಭದ್ರತೆಗಳನ್ನ ಕಂಪನಿಗಳು ನೀಡ್ತಿಲ್ಲ ಎಂದು ಆರೋಪಿಸಿ ಆನ್ಲೈನ್ ಡೆಲಿವರಿ ಬಾಯ್ಸ್ ಕ್ರಿಸ್ಮಸ್ ಸಂಭ್ರಮಕ್ಕೆ ಶಾಕ್ ನೀಲು ಮುಂದಾಗಿದ್ದಾರೆ. ಹೀಗಾಗಿ ನಾಳೆ ಆನ್ಲೈನ್ ಸೇವೆ ಆಧಾರಿತ ವರ್ಕರ್ಸ್ ಯೂನಿಯನ್ ಸಂಘಟನೆ ಮುಷ್ಕರಕ್ಕೆ ಕರೆ ನೀಡಿದೆ.
ಪ್ರಮುಖ ಇ-ಕಾಮರ್ಸ್, ಆಹಾರ ವಿತರಣೆ ಮತ್ತು ಗೃಹ ಸೇವೆಯಿಂದ ದೂರು ಉಳಿಯಲಿದ್ದಾರೆ. ಸ್ವಿಗ್ಗಿ, ಜೊಮ್ಯಾಟೋ, ಬ್ಲಿಂಕಿಟ್, ಅಮೆಜಾನ್ ಸೇರಿದಂತೆ ಯಾವುದೇ ಆನ್ಲೈನ್ ಸೇವೆ ಮಾಡಬಾರದೆಂದು ನಿರ್ಧರಿಸಿದ್ದಾರೆ.

