September 24, 2026
Thursday, September 24, 2026
spot_img

ವರ್ಕ್ ಫ್ರಮ್ ಹೋಂ ಆಮಿಷ: ಪ್ರಾಡೆಕ್ಟ್ ರಿವ್ಯೂ ಹೆಸರಲ್ಲಿ 40 ಸಾವಿರ ರೂ. ಕಳೆದುಕೊಂಡ ಮಹಿಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯಲ್ಲಿ ವರ್ಕ್ ಫ್ರಮ್ ಹೋಂ ಹೆಸರಿನಲ್ಲಿ ಹೊಸ ರೀತಿಯ ಸೈಬರ್ ವಂಚನೆ ಬೆಳಕಿಗೆ ಬಂದಿದೆ. ಗೂಗಲ್ ರಿವ್ಯೂ ಹಾಗೂ ಪ್ರಾಡೆಕ್ಟ್ ರಿವ್ಯೂ ಟಾಸ್ಕ್‌ಗಳ ಮೂಲಕ ಹಣ ಗಳಿಸಬಹುದು ಎಂದು ಆಮಿಷವೊಡ್ಡಿ ಅಮಾಯಕರನ್ನು ಗುರಿಯಾಗಿಸಲಾಗುತ್ತಿದೆ.

ಬೆನ್ಸನ್ ಟೌನ್ ನಿವಾಸಿಯಾದ 55 ವರ್ಷದ ಮಹಿಳೆ ಈ ಜಾಲಕ್ಕೆ ಸಿಲುಕಿದ್ದಾರೆ. ಪಿಯುಸಿ ವಿದ್ಯಾರ್ಥಿಯಾದ ಅವರ ಪುತ್ರನ ಮೊಬೈಲ್‌ಗೆ “ಮನೆಯಲ್ಲೇ ಕುಳಿತು ಹಣ ಸಂಪಾದನೆ” ಎಂಬ ಸಂದೇಶ ಬಂದಿತ್ತು. ಕೆಲ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದರೆ ಹೆಚ್ಚುವರಿ ಲಾಭ ಸಿಗುತ್ತದೆ ಎಂದು ನಂಬಿಸಿ ಮೊದಲು ಕಡಿಮೆ ಮೊತ್ತವನ್ನು ಪಾವತಿಸಲು ಹೇಳಿದ್ದಾರೆ. ಆರಂಭದಲ್ಲಿ ಸಣ್ಣ ಮೊತ್ತದಿಂದ ಆರಂಭವಾದ ಹಣದ ಬೇಡಿಕೆ ಕ್ರಮೇಣ ಸಾವಿರಾರು ರೂಪಾಯಿಗೆ ಏರಿತು.

ಇದನ್ನೂ ಓದಿ:

ಟಾಸ್ಕ್ ಪೂರ್ಣಗೊಂಡ ಬಳಿಕ ದೊಡ್ಡ ಮೊತ್ತ ವಾಪಸ್ ಸಿಗುತ್ತದೆ ಎಂದು ಸುಳ್ಳು ಭರವಸೆ ನೀಡಿ ಮತ್ತಷ್ಟು ಹಣ ಹಾಕಿಸಿಕೊಂಡಿದ್ದಾರೆ. ಅನುಮಾನಗೊಂಡ ಮಹಿಳೆ ಹಣ ವಾಪಸ್ ಕೇಳಿದರೂ, ಇನ್ನಷ್ಟು ಟಾಸ್ಕ್ ಮುಗಿಸಬೇಕು ಎಂದು ಒತ್ತಾಯಿಸಲಾಗಿದೆ. ಒಟ್ಟು 40 ಸಾವಿರ ರೂ. ಪಾವತಿಸಿದ ಬಳಿಕ ವಂಚನೆ ನಡೆದಿರುವುದು ಸ್ಪಷ್ಟವಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Must Read