ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್ಲೈನ್ ತರಗತಿ ನಡೆಯುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ತನ್ನ ಪ್ರೊಫೆಸರ್ಗೆ ಚಪ್ಪಲಿಯಿಂದ ಹೊಡೆದಿದ್ದಾನೆ.
ದೆಹಲಿಯ ಆನ್ಲೈನ್ ಕಲಿಕೆ ವೇದಿಕೆ ಫಿಸಿಕ್ಸ್ವಾಲಾದಲ್ಲಿ ಲೈವ್ ಸ್ಟ್ರೀಮಿಂಗ್ನಲ್ಲೇ ವಿದ್ಯಾರ್ಥಿ ಬಾರಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಯ ವರ್ತನೆಗೆ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ.
ಕಪ್ಪು ಬೋರ್ಡ್ ಎದುರು ನಿಂತು ಟೀಚರ್ ಪಾಠಮಾಡುವ ವೇಳೆ ವಿದ್ಯಾರ್ಥಿ ಏಕಾಏಕಿ ದಾಳಿ ಮಾಡಿದ್ದಾನೆ, ಇದಕ್ಕೆ ಕಾರಣವೇನು ಎಂದು ತಿಳಿದುಬಂದಿಲ್ಲ. ಏನೇ ಆಗಿರಲಿ ಶಿಕ್ಷಕರಿಗೆ ಈ ರೀತಿ ಮಾಡಿದ್ದು ತಪ್ಪು ಎಂದು ನೆಟ್ಟಿಗರು ಹೇಳ್ತಿದ್ದಾರೆ.