ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಗಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂನಿಂದ ಕೂಡಿರುವ ಧಾನ್ಯ. ರಾಗಿ ಉಂಡವನಿಗೆ ರೋಗವಿಲ್ಲ ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ. ಮುದ್ದೆ ತಿನ್ನಲು ಆಗದವರು ಈ ರೀತಿ ಇಡ್ಲಿ ಮಾಡಿ ನೋಡಿ..ಪದೇ ಪದೇ ತಿನ್ನಬೇಕೆನಿಸುತ್ತದೆ.
ಬೇಕಾಗುವ ಸಾಮಾಗ್ರಿಗಳು:
ರಾಗಿ – 1 ಕಪ್
ಉದ್ದಿನಬೇಳೆ – 1 ಕಪ್
ಉಪ್ಪು – ರುಚಿಗೆ ಬೇಕಾದಷ್ಟು, ಸೋಡಾ-ಚಿಟಿಕೆ
ತಯಾರಿಸುವ ವಿಧಾನ:
ಮೊದಲು ರಾಗಿಯನ್ನು ಚೆನ್ನಾಗಿ ತೊಳೆಯಿರಿ. ಈಗ ಇದಕ್ಕೆ ನೀರು ಹಾಕಿ ರಾತ್ರಿಯಿಡೀ ನೆನೆಸಿಡಿ. ಹಾಗೆಯೇ ಉದ್ದಿನಬೇಳೆ ತೊಳೆದು ಇನ್ನೊಂದು ಪಾತ್ರೆಗೆ ತೆಗೆದುಕೊಂಡು ರಾತ್ರಿಯಿಡೀ ನೆನೆಸಿಡಿ. ಬೆಳಗಾದ ಕೂಡಲೇ ಒಂದು ಮಿಕ್ಸಿ ಜಾರಿಗೆ ರಾಗಿ ಹಾಘೂ ಉದ್ದಿನ ಬೇಲೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಈ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಅರ್ಧ ಗಂಟೆ ಬಿಡಿ. ಈಗ ಚಿಟಿಕೆ ಅಡುಗೆ ಸೋಡಾ ಸೇರಿಸಿ ತುಪ್ಪ ಅಥವಾ ಅಡುಗೆ ಎಣ್ಣೆಯಿಂದ ಗ್ರೀಸ್ ಮಾಡಿದ ಇಡ್ಲಿ ಪ್ಲೇಟ್ ತೆಗೆದುಕೊಂಡು ಮಧ್ಯಮ ಉರಿಯಲ್ಲಿ 20 ನಿಮಿಷಗಳ ಕಾಲ ಒಲೆಯ ಮೇಲೆ ಇರಿಸಿ ಹಬೆಯಲ್ಲಿ ಬೇಯಿಸಿ. ತುಂಬಾ ಆರೋಗ್ಯಕರವಾದ ರಾಗಿ ಇಡ್ಲಿ ಸವಿಯಿರಿ.