ಹೊಸದಿಗಂತ ವರದಿ, ಬಾಗಲಕೋಟೆ(ಜಮಖಂಡಿ):
ರಾಜ್ಯದ ಜನರಿಗೆ ಕಾಂಗ್ರೆಸ್ ಪಕ್ಷದವರು ಬೋಗಸ್ ಗ್ಯಾರಂಟಿಯನ್ನು ನೀಡಿದರೆ ಭಾರತೀಯ ಜನತಾ ಪಕ್ಷದವರು ಕೊರೋನಾದಲ್ಲಿ ಬದುಕಿನ ಗ್ಯಾರಂಟಿಯನ್ನು ನೀಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಜಮಖಂಡಿ ನಗರದ ಶಾಸಕರ ಸಾಕ್ಷಾತ್ಕಾರ ನಿವಾಸದ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿ ಜಮಖಂಡಿ ಮತಕ್ಷೇತ್ರದಿಂದ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶ ಹಾಗೂ ವೈಚಾರಿಕ ಸಂಘೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಕಿಸಾನ ಸಮ್ಮಾನದಲ್ಲಿ 6 ಸಾವಿರ ರೂ. ನೀಡಿದರೆ ನಮ್ಮ ಅವಧಿಯಲ್ಲಿ 4000 ರೂಗಳನ್ನು ನೀಡಿದ್ದೆವು ಆದರೆ ಇಂದು ಕಾಂಗ್ರೆಸ್ ಸರಕಾರವು ನಿಲ್ಲಿಸಿದೆ. ರೈತರ ಬೆಳೆಗಳಿಗಷ್ಟೇ ಅಲ್ಲದೇ ರೈತ ಕುಟುಂಬಕ್ಕೂ ನಮ್ಮ ಸರ್ಕಾ ರದಿಂದ ವಿಮಾ ಯೋಜನೆ ಮಾಡಲಾಗಿತ್ತು. ಅದನ್ನು ಕೂಡ ಈ ಸಕರ್ಾರ ನಿಲ್ಲಿಸಿದೆ. ಕಾಂಗ್ರೆಸ್ ಸರ್ಕಾರ ಜನ ವಿರೋಧಿಯಾಗಿದೆ ಎಂದರು.
ರಾಜ್ಯದಲ್ಲಿ ಭೀಕರ ಬರಗಾಲ ಬಿದ್ದಿದೆ. ಆಗಸ್ಟ್ ಕೊನೆ ವಾರದಲ್ಲಿ 216 ತಾಲ್ಲೂಕು ಬರಪೀಡಿ ಎಂದು ಘೋಷಣೆ ಮಾಡಿದೆ. ಪರಿಹಾರಕ್ಕೆ ಕೇಂದ್ರದತ್ತ ಬೊಟ್ಟು ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಹಣ ಇಲ್ಲ. ಗ್ಯಾರಂಟಿಗೆ ಮಾತ್ರ ಹಣ ನೀಡುತ್ತಿದೆ. ಅದನ್ನು ಕೂಡ ಪೂರ್ಣ ಪ್ರಮಾಣ ನೀಡುತ್ತಿಲ್ಲ ಎಂದು ಆರೋಪಿಸಿದರು.
ಮಾಜಿ ಸಚಿವ ಗೋವಿಂದ ಕಾರಜೋಳ,ಸುರೇಶ ಕುಮಾರ,ಶಾಸಕ ಜಗದೀಶ ಗುಡಗುಂಟಿ ಇನ್ನಿತರ ನಾಯಕರು ಇದ್ದರು.