ಹೊಸದಿಗಂತ ವರದಿ, ಚಿತ್ರದುರ್ಗ:
ಕಾಂಗ್ರೆಸ್ ಪಕ್ಷ ಸೇರುವ ಕುರಿತು ಅ.20 ರಂದು ನಿರ್ಧಾರ ಪ್ರಕಟಿಸುವುದಾಗಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.
ಚಿತ್ರದುರ್ಗದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಕುರಿತು ಇಂದು ಬೆಂಬಲಿಗರ ಸಭೆ ನಡೆಸಿದ್ದು, ನನ್ನ ನಿರ್ಧಾರಕ್ಕೆ ಬೆಂಬಲಿಗರು ಸಮ್ಮತಿ ಸೂಚಿಸಿದ್ದಾರೆ. ಸಮಾಜದ ಮುಖಂಡರ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ನಮ್ಮ ಸಮಾಜದ & ಹಿತ ಬಯಸುವವರು ನನ್ನನ್ನು ಕಾಂಗ್ರೆಸ್ ಗೆ ಆಹ್ವಾನಿಸಿದ್ದರು. ಡಿ.ಕೆ.ಶಿ. ಸಾಹೇಬ್ರು ಕೂಡಾ ಆಹ್ವಾನ ಮಾಡಿದ್ದರು. ನಮ್ಮ ವೈಯಕ್ತಿಕ ಯಾವುದೇ ಬೇಡಿಕೆ ಇಲ್ಲ. ಯಾವುದೇ ಬೇಡಿಕೆ ನಾನು ಇಟ್ಟಿಲ್ಲ. ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ಉದ್ದೇಶ. ಅಭಿವೃದ್ಧಿ ಪರ ಚಿಂತನೆ ಮಾಡುವ ಮನಸ್ಥಿತಿ ಇದೆ. ಹಾಗಾಗಿ ಕಾಂಗ್ರೆಸ್ ಸೇರ್ಪಡೆ ಖಚಿತ ಎಂದು ಹೇಳಿದರು.
ಬಿಜೆಪಿಯಲ್ಲಿ ಯಾವುದೇ ಅನ್ಯಾಯವಾಗಿಲ್ಲ. ಇಬ್ಬರು ಸಿಎಂ ಗಳು ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿದ್ದರು.ಕೋಟ್ಯಾಂತರ ಅನುದಾನ ನೀಡಿದ್ದರು, ಕೆಲಸ ಕೂಡಾ ಮಾಡಿರುವೆ. ಸಮುದಾಯದ ವಿಷಯದಲ್ಲಿ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಸಮುದಾಯ 25 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಇದೆ. ರಾಜಕೀಯ ಪ್ರಾತಿನಿಧ್ಯ & ಬೇರೆ ಸ್ಥಾನಮಾನ ವಿಷಯದಲ್ಲಿ ಗೊಂದಲ ಆಯ್ತು. ಹಾಗಾಗಿ ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದೇನೆ ಎಂದರು.
ನಾನು ಕಾಂಗ್ರೆಸ್ ನಾಯಕರ ಮುಂದೆ ಯಾವುದೇ ಡಿಮ್ಯಾಂಡ್ಇ ಟ್ಟಿಲ್ಲ. ಜನಪರ ಹಿತಕ್ಕೆ ಮಾತ್ರ ನಮ್ಮ ಸಹಮತ. ಪತಿಗೆ MLC ಟಿಕೆಟ್ ನೀಡುತ್ತಾರೆ ಎಂದು ನಾನು ಹೋಗಲ್ಲ. ಕೇಳುವುದು ಶ್ರೀನಿವಾಸ್ ಅವರ ಹಕ್ಕು. ರಾಜ್ಯದ ಅಧ್ಯಕ್ಷರಾಗಿ, ಜನಾಂಗ ಪ್ರತಿನಿಧಿಸುವವರು. MLC ಟಿಕೆಟ್ ನೀಡಿದರೆ ನಮಗೆ ಸಂತೋಷ ಎಂದು ಹೇಳಿದರು.